ದೇಶ

ಗಣರಾಜ್ಯೋತ್ಸವ ದಿನದಂದು ಉಗ್ರದಾಳಿಗೆ ಭಾರಿ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

Srinivasamurthy VN
ನವದೆಹಲಿ: ಅಸಿಯಾನ್ ನಾಯಕರು ಅತಿಥಿಗಳಾಗಿ ಭಾಗವಹಿಸುತ್ತಿರುವ ಗಣರಾಜ್ಯೋತ್ಸವ ದಿನಕ್ಕೆ ಭಾರತ ಸಕಲ ಸಿದ್ಧತೆ ನಡೆಸಿರುವಂತೆಯೇ ಅತ್ತ ಇಂಡೋ-ಪಾಕ್ ಅಂತಾರಾಷ್ಟೀಯ ಗಡಿಯಲ್ಲಿ ಭಾರಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಇದಕ್ಕಾಗಿ ಮೂರರಿಂದ ನಾಲ್ಕು ಉಗ್ರರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಈ ಉಗ್ರರು ಪಾಕಿಸ್ತಾನಿ ಸೇನಾ ಕ್ಯಾಂಪ್ ಗಳತ್ತ ಕಾಣಿಸಿಕೊಂಡಿದ್ದು, ಭಾರತೀಯ ಗಡಿಯೊಳಗೆ ಒಳನುಸುಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. 
ಅಂತೆಯೇ ಈ ಬಗ್ಗೆ ತೀವ್ರಕಟ್ಟೆಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಿದ್ದು, ಉಗ್ರರಿಗೆ ಪಾಕಿಸ್ತಾನಿ ಗುಪ್ತಚರ ಇಲಾಖೆ ಐಎಸ್ಐ ಉಗ್ರರನ್ನು ಭಾರತೀಯ ಗಡಿಯೊಳಗೆ ಒಳನುಸುಳಲು ನೆರವು ನೀಡುತ್ತಿದ್ದು, ಗಡಿಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಹೇಳಿದೆ.
SCROLL FOR NEXT