ದೇಶ

ಅಬ್ದುಲ್ ಕಲಾಂ ಅವರು ಅಂತರಿಕ್ಷ ವಿಜ್ಞಾನಿಯಾದರೆ, ಪ್ರಧಾನಿ ಮೋದಿ ಸಮಾಜ ವಿಜ್ಞಾನಿ: ರಾಮನಾಥ್ ಕೋವಿಂದ್

Sumana Upadhyaya
ಅಹ್ಮದಾಬಾದ್: ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯೆ ಸಾಮ್ಯತೆಯಿದೆ ಎಂದು ಹೇಳಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿಗಳು ಅಂತರಿಕ್ಷ ವಿಜ್ಞಾನಿಯಾಗಿದ್ದರೆ ಇಂದಿನ ಪ್ರಧಾನಿ ಸಮಾಜ ವಿಜ್ಞಾನಿ ಎಂದು ಹೇಳಿದ್ದಾರೆ.
ಅವರು ನಿನ್ನೆ ಗುಜರಾತ್ ನ ಅಹಮದಾಬಾದ್ ನಲ್ಲಿ ಗುಜರಾತ್ ವಿಶ್ವವಿದ್ಯಾಲಯದ 66ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದರು.
ಕಲಾಂ ಸರ್ ಅವರು ನನ್ನ ಪೂರ್ವಾಧಿಕಾರಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ಅವರು ರಾಷ್ಟ್ರಪತಿಯಾದರೂ ಕೂಡ ಮೂಲತಃ ವಿಜ್ಞಾನಿಯಾಗಿದ್ದರು. ನಾವು ಅವರನ್ನು ಅಂತರಿಕ್ಷ ವಿಜ್ಞಾನಿ ಎಂದು ಉಲ್ಲೇಖಿಸಿದರೆ ಮೋದಿಯವರು ಸಮಾಜ ವಿಜ್ಞಾನಿ ಎಂದು ಕೋವಿಂದ್ ಹೊಗಳಿದರು.
ಮೋದಿಯವರು ಗುಜರಾತ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ, ಕಲಾಂ ಸರ್ ಕೂಡ ಇಲ್ಲಿ ಕೆಲ ಸಮಯ ವಾಸವಾಗಿದ್ದರು ಎಂದರು.
SCROLL FOR NEXT