ಸಂಗ್ರಹ ಚಿತ್ರ 
ದೇಶ

1947ರಲ್ಲೇ ಶತೃತ್ವ ಮರೆತಿದ್ದೇವೆ.. ಆದರೆ ಪಾಕಿಸ್ತಾನ ಮರೆತಿಲ್ಲ: ಮೋಹನ್ ಭಾಗ್ವತ್

ಭಾರತ ದೇಶ 1947ರ ಶತೃತ್ವವನ್ನು ಮರೆತಿದೆಯಾದರೂ, ಪಾಕಿಸ್ತಾನ ಮಾತ್ರ ಇನ್ನೂ ಅದನ್ನು ಮರೆತಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಗುವಾಹತಿ: ಭಾರತ ದೇಶ 1947ರ ಶತೃತ್ವವನ್ನು ಮರೆತಿದೆಯಾದರೂ, ಪಾಕಿಸ್ತಾನ ಮಾತ್ರ ಇನ್ನೂ ಅದನ್ನು ಮರೆತಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಬ್ರಹ್ಮಪುತ್ರಾ ನದಿದಂಡೆಯ ಲೂತ್‌ ಪೊರಿಯ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಭಾಗ್ವತ್, ಪಾಕಿಸ್ತಾನ ಕೂಡ ಹಿಂದೂಸ್ತಾನದ ಭಾಗವಾಗಿದ್ದು, ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದದ್ದು  ಪಾಕಿಸ್ತಾನದಿಂದಲೇ.. ಆದರೂ ಪಾಕಿಸ್ತಾನ ತನ್ನನ್ನು ಭಾರತ ಎಂದು ಕರೆದುಕೊಳ್ಳುತ್ತಿಲ್ಲ. ಏಕೆಂದರೆ ಇದರಲ್ಲಿ ಹಿಂದುತ್ವದ ಕಂಪು ಹೊರಸೂಸುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನ ತನ್ನನ್ನು ತಾನು ಹಿಂದೂಸ್ತಾನ ಎಂದು  ಕರೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಹಿಂದುತ್ವ ಇರುವವರೆಗೂ ಭಾರತ ಉಳಿಯುತ್ತದೆ ಎಂದ ಭಾಗ್ವತ್ ಪಾಕಿಸ್ತಾನ ಕೂಡ ಹಿಂದುತ್ವದ ಭಾಗವಾಗಿದೆ. ಭಾರತ ಸುಸ್ಥಿರವಾಗಿಡಲು ವೈವಿಧ್ಯತೆಯೇ ಬಲವಾಗಿರುವ ಹಿಂದುತ್ವ ಇಂಧನವಾಗಿದ್ದು, ಪ್ರಾಚೀನ  ಭಾರತೀಯ ನಾಗರಿಕತೆ ಬೆಳೆದುಬಂದಿರುವುದು ಇಂದಿನ ಪಾಕಿಸ್ತಾನದಲ್ಲೇ. ಆದರೆ ಇದು ಭಾರತ ಎಂದು ಹೆಸರಿಕೊಳ್ಳದಿರಲು ಕಾರಣ ಈ ಪದ ಹಿಂದುತ್ವದ ಕಂಪು ಹೊಂದಿರುವುದು" ಎಂದು ಅವರು ಹೇಳಿದರು.
ಭಾರತ, ಪಾಕಿಸ್ತಾನದ ಜತೆಗಿನ ದ್ವೇಷ-ಭಾವನೆಯನ್ನು 1947ರ ಆಗಸ್ಟ್ 15ರಂದೇ ಮರೆತಿದೆಯಾದರೂ ಪಾಕಿಸ್ತಾನ ಮರೆತಿಲ್ಲ. ಹಿಂದುತ್ವ ಎನ್ನುವುದು ಹಿಂದೂಯಿಸಂ ಅನ್ನು ಮೀರಿದ ಸಿದ್ಧಾಂತವಾಗಿದೆ. ಭಾರತವ ವೈಶಿಷ್ಟ್ಯ  ಇರುವುದು ವೈವಿಧ್ಯತೆಯಲ್ಲಿ. ವೈವಿಧ್ಯತೆಯ ಹೊರತಾಗಿಯೇ ಭಾರತೀಯರಲ್ಲಿ ಒಗ್ಗಟ್ಟಿನ ಭಾವನೆ ಇದೆ. ಭಾರತೀಯ ಸಂಪ್ರದಾಯ ಎಲ್ಲರಿಗೆ, ಎಲ್ಲ ಸಮುದಾಯಕ್ಕೆ, ಎಲ್ಲ ಧರ್ಮಕ್ಕೂ ಒಂದೇ. ಜೀವನಮಾರ್ಗ ಮತ್ತು ನಡವಳಿಕೆಯ  ಪಾಠವನ್ನು ಇಡೀ ವಿಶ್ವಕ್ಕೆ ಭಾರತ ಬೋಧಿಸಿದೆ ಎಂದು ಅವರು ಹೇಳಿದರು.
ಇನ್ನು ಪ್ರಸ್ತುತ ನಡೆಯುತ್ತಿರುವ ಹಿಂದೂ ಸಮ್ಮೇಳನ ಅತೀ ದೊಡ್ಡ ಸಮ್ಮೇಳನ ಎಂದು ಹೇಳಲಾಗುತ್ತಿದ್ದು, ಇದರ ಮುಂದುವರೆದ ಭಾಗವಾಗಿ ತ್ರಿಪುರಾದಲ್ಲಿ ಫೆಬ್ರವರಿ 17 ಹಾಗೂ ಮೇಘಾಲಯ ಹಾಗೂ ನಾಗಾಲ್ಯಾಂಡ್‌ ನಲ್ಲಿ ಫೆಬ್ರವರಿ  27ಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!