ನವದೆಹಲಿ: ಭಾರತದ ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕುಗಳು, ಟೆಲಿಕಾಂ ಸಂಸ್ಥೆಗಳು ಮತ್ತು ಸಾರಿಗೆ ಇಲಾಖೆಯಂತಹ ಸಂಸ್ಥೆಗಳು ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಭಾರತದ ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥರ ಹೇಳಿಕೆಗೆ ಅಮೆರಿಕದ ಗುಪ್ತಚರ ಇಲಾಖೆಯ ಬೇಹುಗಾರಿಕೆಯನ್ನು ಬಯಲುಗೊಳಿಸಿದ್ದ ಎಡ್ವರ್ಡ್ ಸ್ನೋಡೆನ್ ಸಹಮತ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಆಧಾರ್ ಸೋರಿಕೆ ಸಂಬಂಧ ವರದಿ ಮಾಡಿದ್ದ ಪತ್ರಕರ್ತೆಯ ಸಾಧನೆಯನ್ನು ಕೊಂಡಾಡಿದ್ದ ಸ್ನೋಡೆನ್ ಇದೀಗ ಭಾರತದ ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತದ ಮಾಜಿ ರಾ ಮುಖ್ಯಸ್ಥರು ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್ ಗಳು, ಟೆಲಿಕಾಂ ಸಂಸ್ಥೆಗಳು, ಸಾರಿಗೆ ಸಂಸ್ಥೆಗಳು ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಎಡ್ವರ್ಡ್ ಸ್ನೋಡೆನ್ ಸಹಮತ ವ್ಯಕ್ತಪಡಿಸಿದ್ದು, ಭಾರತ ಮಾಜಿ ರಾ ಅಧಿಕಾರಿಯ ಹೇಳಿಕೆಗೆ ನಾನು ಬೆಂಬಲ ವ್ಯಕ್ತಪಡಿಸಿತ್ತೇನೆ. ಅನಿವಾರ್ಯತೆ ಇಲ್ಲದೇ ಇದ್ದರೂ ಆಧಾರ್ ಬೇಕೇ ಬೇಕು ಎಂದು ಕೇಳುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ನೋಡೆನ್ ಹೇಳಿದ್ದಾರೆ.
ಅಂತೆಯೇ ಈ ಸಂಸ್ಥೆಗಳೂ ಕೂಡ ತಮ್ಮದೇ ಆದ ಡೇಟಾಬೇಸ್ (ದತ್ತಾಂಶ ಸಂಗ್ರಹ ವ್ಯವಸ್ಥೆ)ಯನ್ನು ಹೊಂದಿರುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ. ಪ್ರಸುತ ಸರ್ಕಾರ ಈ ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿ ಕೇಳದಂತೆ ತಡೆದರೂ, ಈಗಾಗಲೇ ಅವರು ಸಂಗ್ರಹಿಸಿರುವ ಮಾಹಿತಿ ಅವುಗಳ ಡೇಟಾಬೇಸ್ ನಲ್ಲಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಧಾರ್ ಸುರಕ್ಷಿತವಿರಹಬಹುದು ಅಥವಾ ಇಲ್ಲದೇ ಇರಬಹುದು ಅದು ಎಲ್ಲ ಭಾರತೀಯ ನಾಗರಿಕರ ಹಕ್ಕು ಎಂದೂ ಸ್ನೋಡೆನ್ ಟ್ವೀಟ್ ಮಾಡಿದ್ದಾರೆ.
ಏಡ್ವರ್ಡ್ ಸ್ನೋಡೆನ್ ಅವರ ಈ ಟ್ವೀಟ್ ಗಳಿಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕರು ಆಧಾರ್ ಮಾಹಿತಿ ಸುರಕ್ಷಿತವಾಗಿಲ್ಲ ಎಂದು ಆಭಿಪ್ರಾಯಪಟ್ಟಿದ್ದಾರೆ.