ದೇಶ

ನೂತನ ಕೇಂದ್ರ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅಧಿಕಾರ ಸ್ವೀಕಾರ

Srinivasamurthy VN
ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅವರು ಮಂಗಳವಾರ ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಹಿಂದಿನ ಚುನಾವಣಾ ಆಯುಕ್ತರಾಗಿದ್ದ ಎ.ಕೆ. ಜೋಟಿ ನಿನ್ನೆಯಷ್ಟೇ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಕಾನೂನು ಸಚಿವಾಲಯ ನೂತನ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅವರನ್ನು ನೇಮಕ ಮಾಡಿ ಅಧಿಕೃತ ಪ್ರಕಟಣೆ  ಹೊರಡಿಸಿತ್ತು. ಅಲ್ಲದೆ ಒಪಿ ರಾವತ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಅಂಕಿತ ಹಾಗಿದ್ದಾರೆ ಎನ್ನಲಾಗಿದೆ.
1977ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಒಪಿ ರಾವತ್ ಅವರು ಮಧ್ಯ ಪ್ರದೇಶ ಮೂಲದವರಾಗಿದ್ದು, 2015ರ ಆಗಸ್ಟ್ ನಲ್ಲಿ ಚುನಾವಣಾ ಆಯೋಗಕ್ಕೆಸೇರ್ಪಡೆಯಾಗಿದ್ದರು. 
ಲಾಭದಾಯಕ ಹುದ್ದೆ ಪ್ರಕರಣ ಸಂಬಂಧ ಆಪ್ ನ 20 ಶಾಸಕರನ್ನು ಅನರ್ಹಗೊಳಿಸುವ ಕುರಿತು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ ದಿನವೇ ಒಪಿ ರಾವತ್ ಆಯುಕ್ತರಾಗಿ ಆಯ್ಕೆಯಾಗಿದ್ದರು. ಇನ್ನು  ರಾವತ್ ನೇತೃತ್ವದಲ್ಲಿ ಆಯೋಗ ಕರ್ನಾಟಕ, ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆ ಮೇಲುಸ್ತುವಾರಿ ನೋಡಿಕೊಳ್ಳಲಿದೆ.
SCROLL FOR NEXT