ಸಂಗ್ರಹ ಚಿತ್ರ 
ದೇಶ

ಮೇವು ಹಗರಣದ ತೀರ್ಪು: ಬಿಜೆಪಿ, ನಿತೀಶ್ ಕುತಂತ್ರ, ತೀರ್ಪು ಪ್ರಶ್ನಿಸಿ ಶೀಘ್ರ ಅರ್ಜಿ: ತೇಜಸ್ವಿ ಯಾದವ್

ಮೇವು ಹಗರಣದ 3ನೇ ಪ್ರಕರಣದ ತೀರ್ಪಿನಲ್ಲಿ ಬಿಜೆಪಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಕುತಂತ್ರ ಅಡಗಿದ್ದು, ತೀರ್ಪು ಪ್ರಶ್ನಿಸಿ ಶೀಘ್ರ ಮೇಲಿನ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.

ರಾಂಚಿ: ಮೇವು ಹಗರಣದ 3ನೇ ಪ್ರಕರಣದ ತೀರ್ಪಿನಲ್ಲಿ ಬಿಜೆಪಿ ಮತ್ತು  ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಕುತಂತ್ರ ಅಡಗಿದ್ದು, ತೀರ್ಪು ಪ್ರಶ್ನಿಸಿ ಶೀಘ್ರ ಮೇಲಿನ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಲಾಲು ಪ್ರಸಾದ್  ಯಾದವ್ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.

ಅತ್ತ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, ತೀರ್ಪಿನಿಂದ ತಮಗೇನೂ ಅಚ್ಚರಿಯಾಗಿಲ್ಲ. ತೀರ್ಪಿನಲ್ಲಿ ಬಿಜೆಪಿ ಮತ್ತು  ಬಿಹಾರ  ಸಿಎಂ ನಿತೀಶ್ ಕುಮಾರ್ ಅವರ ಕುತಂತ್ರ ಅಡಗಿದ್ದು, ನಿತೀಶ್ ಬಿಜೆಪಿ ಪಕ್ಷದ ಕೈಗೊಂಬೆಯಾಗಿದ್ದಾರೆ. ಅಂತೆಯೇ ಲಾಲು ಪ್ರಸಾದ್‌ ಅವರ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಮುಖ್ಯವಾಗಿ ನಿತೀಶ್‌ ಕುಮಾರ್ ಹೂಡಿರುವ  ಪಿತೂರಿ ಜನರಿಗೆ ತಿಳಿದಿದೆ.

ಲಾಲು ಪ್ರಸಾದ್ ಅವರು ಜನನಾಯಕರಾಗಿದ್ದು, ಜನರಲ್ಲಿ ಅವರ ಕುರಿತಾಗಿರುವ ಸಕಾರಾತ್ಮಕ ಭಾವನೆಗಳಿಗೆ ವಿರುದ್ಧವಾಗಿ ಅವರನ್ನು ಖಳನಾಯಕರಂತೆ ಬಿಂಬಿಸುವ ಯತ್ನ ನಡೆಸುತ್ತಿದೆ. ಲಾಲು ಪ್ರಸಾದ್ ಅವರನ್ನು ಜೈಲಿಗೆ ಕಳುಹಿಸಿ, ಡಿಸೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಸಿ ಲಾಭ ಪಡೆಯಲು ಬಿಜೆಪಿ ಷಡ್ಯಂತ್ರ ರೂಪಿಸಿದೆ. ಚುನಾವಣೆಯ ಗೆಲುವಿಗೆ ಲಾಲು ಪ್ರಸಾದ್ ಅವರು ಅಡ್ಡಿಯಾಗುತ್ತಾರೆ ಎಂಬ ಭಯದಿಂದ ಅವರನ್ನು ಮೇವು ಹಗರಣದಲ್ಲಿ ಸಿಲುಕಿಸಲಾಗಿದೆ. ಶೀಘ್ರ ಬಿಜೆಪಿ ಕುತಂತ್ರಕ್ಕೆ ತಕ್ಕ ತಿರುಗೇಟು ನೀಡಲಿದ್ದೇವೆ. ಮೇವು ಹಗರಣಕ್ಕೆ ಸಂಬಂಧಿಸಿದ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಲಾಲೂ ಪ್ರಸಾದ್ ಅವರು ಜನನಾಯಕರಾಗಿದ್ದು, ಜನರ ಭಾವನೆಯಲ್ಲಿ ಅವರನ್ನು ಖಳನಾಯಕರಾಗಿ ಬಿಂಬಿಸುವ ಪ್ರಯತ್ನ ಸಾಗಿದೆ. ಸಿಬಿಐ ನ್ಯಾಯಾಲಯ ಏನೇ ಹೇಳಿರಬಹುದು. ಆದರೆ ಅದರ ಈ ತೀರ್ಪು ಅಂತಿಮವಲ್ಲ. ನಾವು ಶೀಘ್ರ ತೀರ್ಪು ಪ್ರಶ್ನಿಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತೇವೆ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ಸಲ್ಲಿಕೆ ಮಾಡುತ್ತೇವೆ  ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. 

ಇಂದು ಬೆಳಗ್ಗೆಯಷ್ಟೇ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿತ್ತು. ಚಾಯಿಬಾಸಾ  ಖಜಾನೆಯಲ್ಲಿ ರು.33.67 ಕೋಟಿ ಮೊತ್ತದ ವಂಚನೆ ಪ್ರಕರಣದ ಸಂಬಂಧ ಇಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಲಾಲು ಪ್ರಸಾದ್ ಮಾತ್ರವಲ್ಲದೇ ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರನ್ನು ಅಪರಾಧಿ  ಎಂದು ಘೋಷಣೆ ಮಾಡಿರುವ ನ್ಯಾಯಾಲಯ ಅವರಿಗೂ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ಇಬ್ಬರಿಗೂ ತಲಾ 5 ಲಕ್ಷ ರು.ಗಳ ದಂಡ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ