ದೇಶ

69ನೇ ಗಣರಾಜ್ಯೋತ್ಸವ:ಹುತಾತ್ಮ ಯೋಧರಿಗೆ ಗೌರವ ನಮನ, ಆಸಿಯಾನ್ ನಾಯಕರು ಭಾಗಿ

Sumana Upadhyaya
ನವದೆಹಲಿ: ಅಭೂತಪೂರ್ವ ಭದ್ರತೆಯೊಂದಿಗೆ ಆಸಿಯಾನ್ ದೇಶಗಳ 10 ನಾಯಕರ ಉಪಸ್ಥಿತಿಯಲ್ಲಿ ದೆಹಲಿಯ ರಾಜಪಥ್ ನಲ್ಲಿ ದೇಶದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭಗೊಂಡಿತು. ನಂತರ ಆಕರ್ಷಕ ಪಥಸಂಚಲನ ನಡೆಯಿತು. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮ್ ಮತ್ತು ಮೂವರು ಅತಿಥಿಗಳ ಸಮ್ಮುಖದಲ್ಲಿ ಹುತಾತ್ಮ ಯೋಧರಿಗೆ ಅಮರ್ ಜ್ಯೋತಿಯಲ್ಲಿ ಗೌರವ ನಮನ ಸಲ್ಲಿಸಿದರು.
ಇದೀಗ ದೆಹಲಿಯ ರಾಜಪಥ್ ನಲ್ಲಿ ದೇಶದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ಮೆರೆಯುವ ಅನೇಕ ಪ್ರದರ್ಶನಗಳು ನಡೆಯುತ್ತಿವೆ. ಜನರು ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇಂದಿನ ಗಣರಾಜ್ಯೋತ್ಸವ ದಿನದ ಮತ್ತೊಂದು ಆಕರ್ಷಣೆ ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತ ದೇಶದ ಐತಿಹಾಸಿಕ, ನಾಗರಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ತೋರಿಸುವ ಸ್ಥಬ್ಧಚಿತ್ರಗಳು.

ಇದೀಗ ವಿವಿಧ ರಾಜ್ಯಗಳು ತಮ್ಮ ಭೌಗೋಳಿಕ, ಸಾಂಸ್ಕೃತಿರ ವೈವಿಧ್ಯಗಳನ್ನು ತೋರಿಸುವ ಸ್ಥಬ್ಧಚಿತ್ರಗಳು ಸಾಗುತ್ತಿವೆ. ಈ ಬಾರಿ ಕರ್ನಾಟಕದ ವನ್ಯಮೃಗಗಳನ್ನು ವೈಭವವನ್ನು ತೋರಿಸುವ ಸ್ಥಬ್ಧಚಿತ್ರ ದೆಹಲಿಯ ರಾಜಪಥ್ ನಲ್ಲಿ ಪ್ರದರ್ಶನಗೊಂಡಿದೆ.
ಈ ವರ್ಷ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಬ್ಧಚಿತ್ರಗಳ ಮೂಲಕ ಸಾಗುತ್ತಿವೆ.
SCROLL FOR NEXT