ದೇಶ

ಡೊಕ್ಲಾಮ್: ಭಾರತ-ಚೀನಾ ಗಡಿ ಪ್ರದೇಶದಲ್ಲಿ ಯಥಾಸ್ಥಿತಿ ಬದಲಾವಣೆ ಮಾಡದಿರುವುದು ಮುಖ್ಯ-ಭಾರತೀಯ ರಾಯಭಾರಿ!

Srinivas Rao BV
ಬೀಜಿಂಗ್: ಡೊಕ್ಲಾಮ್ ವಿವಾದದ ಬಗ್ಗೆ ಭಾರತೀಯ ರಾಯಭಾರಿ ಅಧಿಕಾರಿ ಮಾತನಾಡಿದ್ದು, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಯಥಾಸ್ಥಿತಿ ಬದಲಾವಣೆ ಮಾಡದಿರುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಚೀನಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿ ಗೌತಮ್ ಬಾಂಬವಾಲೆ, ಚೀನಾ-ಭಾರತದ ಗಡಿಯ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಬದಲಾವಣೆ ಮಾಡುವುದು ಉತ್ತಮವಲ್ಲ ಎಂದು ಹೇಳಿದ್ದಾರೆ. 
ಚೀನಾದ ಗ್ಲೋಬಲ್ ಟೈಮ್ಸ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಗೌತಮ್ ಬಾಂಬವಾಲೆ ಡೋಕ್ಲಾಮ್ ವಿವಾದ ಮುಗಿದ ಬಳಿಕ ಭಾರತ- ಚೀನಾ ಸಿಪಿಇಸಿಯೂ ಸಂಬಂಧಿಸಿದಂತೆ ತಮ್ಮ ಮುಂದಿರುವ ವಿವಾದಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮುಂದುವರೆಸಬೇಕು ಎಂದು ಹೇಳಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳಲ್ಲಿ ಎದುರಾಗಿಸುವ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಭಾರತ ಹಾಗೂ ಚೀನಾದ ಜನತೆ ಹಾಗೂ ನಮ್ಮ ನಾಯಕರು ಸಾಕಷ್ಟು ಅನುಭವ ಹೊಂದಿದ್ದಾರೆ, ವಿವೇಚನೆ ಹೊಂದಿದ್ದಾರೆ ಎಂದು ಬಾಂಬವಾಲೆ ತಿಳಿಸಿದ್ದಾರೆ. 
SCROLL FOR NEXT