ಮುಂಬೈ: ಮುಂಬೈನಲ್ಲಿ ನಕಲಿ ಬಾಬಾ ಓರ್ವ ಆಯಸ್ಸು ಹೆಚ್ಚಿಸುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಎರಡು ಬಾರಿ ಅತ್ಯಾಚಾರ ವೆಸಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 14ರಂದು ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಅತ್ಯಾಚರ ಸಂತ್ರಸ್ತ ಯುವತಿ ದೂರಿನ ಹಿನ್ನೆಲೆಯಲ್ಲಿ ನಕಲಿ ಬಾಬಾ ಧನಂಜಯ್ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ.
ಧನಂಜಯ್ ಮಿಶ್ರಾ ದೂರದಾರ ಯುವತಿ ತಂದೆಯ ಸ್ನೇಹಿತರ ಮನೆಯಲ್ಲಿ ನೆಲೆಸಿದ್ದ. ಜನವರಿಯ ಎರಡನೇ ವಾರದಲ್ಲಿ ಸಂತ್ರಸ್ತೆಯ ಮನೆಗೆ ಬಂದಿದ್ದ ಧನಂಜಯ್ ಎಲ್ಲರ ಅಂಗೈಗಳನ್ನು ನೋಡಿ ಹೋಗಿದ್ದ. ನಂತರ ಅವರ ಮನೆಗೆ ಒಂದೆರಡು ಬಾರಿ ಭೇಟಿ ಮಾಡಿದ್ದಾನೆ. ನಂತರ ಜನವರಿ 14ರಂದು ಸಂತ್ರಸ್ತೆಯ ಮನೆಗೆ ಬಂದ ನಕಲಿ ಬಾಬಾ ಆಯಸ್ಸು ಹೆಚ್ಚಿಸಲು ಪೂಜೆಯನ್ನು ಮಾಡಬೇಕು. ಪೂಜೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒಂದು ಕೋಣೆಯಲ್ಲಿ ಸಿದ್ಧಪಡಿಸುವಂತೆ ಯುವತಿಗೆ ಹೇಳಿದ್ದಾನೆ.
ಕೋಣೆಯಲ್ಲಿ ಪೂಜೆಗೆ ಕುಳಿತಾಗ ನಕಲಿ ಬಾಬಾ ನನ್ನನ್ನು ವಶೀಕರಣ ಮಾಡಿ ತನ್ನ ಬಟ್ಟೆಗಳನ್ನು ಬಿಟ್ಟಿ ಅದೇ ರೀತಿ ಮಾಡುವಂತೆ ಹೇಳಿದ ನಾನು ಅದೇ ರೀತಿ ಮಾಡಿದೆ. ನಂತರ ತನ್ನ ತೊಡೆಯ ಮೇಲೆ ಕುಳಿತು ಮಂತ್ರವನ್ನು ಓದಬೇಕೆಂದು ಹೇಳಿ ನನ್ನ ಮೇಲೆ ಅತ್ಯಾಚಾರ ನಡೆಸಿದ ನಂತರ ನನ್ನ ತಂಗಿಯನ್ನು ಕೋಣೆಗೆ ಕಳಿಸುವಂತೆ ಹೇಳಿದ ಆದರೆ ನನ್ನ ತಂಗಿ ಆತ ಹೇಳಿದಂತೆ ಕೇಳದಿದ್ದಕ್ಕೆ ಶಾಪ ಹಾಕಿ, ನಾನು ಹೇಳಿದಂತೆ ಮಾಡದಿದ್ದರೆ ಶೀಘ್ರದಲ್ಲೇ ಸಾಯುತ್ತೀಯಾ ಎಂದು ಹೇಳಿ ಹೋಗಿದ್ದ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಜನವರಿ 18ರಂದು ಪೋಷಕರಿಗೆ ಇಬ್ಬರು ಯುವತಿಯರು ನಡೆದ ವಿಚಾರವನ್ನು ತಿಳಿಸಿದ್ದಾರೆ. ನಂತರ ಪೋಷಕರು ಆಂಟೋಪ್ ಹಿಲ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.