ಮುಂಬೈ: ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬ ಎಂ. ಆರ್ ಐ ಯಂತ್ರದೊಳಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈಯ ನಾಯರ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಜೇಶ್ ಮಾರು ಮೃತಪಟ್ಟ ದುರ್ದೈವಿ. ಚಿಕಿತ್ಸೆಗಾಗಿ ದಾಖಲಾಗಿದ್ದ ತಮ್ಮ ತಾಯಿಯನ್ನು ನೋಡಲು ಬಂದಿದ್ದ ರಾಜೇಶ್ ಮಾರು,ಆಕ್ಸಿಜನ್ ಸಿಲಿಂಡರ್ ನೊಂದಿಗೆ ಎಂ.ಆರ್ ಐ ಕೊಠಡಿಗೆ ಹೋಗಿ ಸಾವನ್ನಪ್ಪಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ರಾಜೇಶ್ ಮಾರು ಅಳಿಯ ಹರೀಶ್ ಸೊಲಂಕಿ ಆರೋಪಿಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ರವಾನಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಡಾ. ಸಿದ್ದಾಂತ್ ಶಾ, ವಾರ್ಡ್ ಪರಿಚರಕ ಹಾಗೂ ಅಟೆಂಡರ್ ಸುನೀತಾ ಸುರ್ವೆ ಎಂಬುವರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.ಆಸ್ಪತ್ರೆಯಲ್ಲಿನ ಸಿಸಿಟಿವಿ ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಲಿಸಿದ್ದಾರೆ
ಮೃತರ ಕುಟುಂಬ ಸದಸ್ಯರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.