ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಫ್ಘಾನಿಸ್ತಾನ: 4 ತಿಂಗಳ ಹಸುಗೂಸಿನಲ್ಲಿ ಬಾಂಬ್ ಇಟ್ಟು ಸಾಗಿಸುತ್ತಿದ್ದ ತಾಲೀಬಾನ್ ಉಗ್ರರು!

4 ತಿಂಗಳ ಮಗುವಿನಲ್ಲಿ ಬಾಂಬ್ ಇಟ್ಟು ಸ್ಫೋಟಕವನ್ನು ಸಾಗಿಸುತ್ತಿದ್ದ ಘಟನೆ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದಿದೆ.

ಸಂಗ್ರಹ ಚಿತ್ರ
Srinivas Rao BV
Updated On : 28 Jan 2018, 12:43 pm
ಅಫ್ಘಾನಿಸ್ತಾನ: 4 ತಿಂಗಳ ಮಗುವಿನಲ್ಲಿ ಬಾಂಬ್ ಇಟ್ಟು ಸ್ಫೋಟಕವನ್ನು ಸಾಗಿಸುತ್ತಿದ್ದ ಘಟನೆ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದಿದೆ. 
ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯವನ್ನು ಪ್ರವೇಶಿಸುತ್ತಿದ್ದ ಉಗ್ರರ ತಂಡವನ್ನು ತಡೆದಾಗ ಮಗುವಿನಲ್ಲಿ ಬಾಂಬ್ ಇಟ್ಟಿದ್ದು ಬೆಳಕಿಗೆ ಬಂದಿದೆ. ಅಫ್ಘಾನಿಸ್ತಾನದ ಸ್ವತಂತ್ರ ಮಾನವ ಹಕ್ಕು ಆಯೋಗದ ಮುಖ್ಯಸ್ಥರಾದ ಸೋವಿತಾ ಅಬ್ಲುರಾಹಿಜಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಶಸ್ತ್ರ ಹೋರಾಟದಲ್ಲಿ ಮಕ್ಕಳನ್ನು ಬಳಕೆ ಮಾಡುವುದು ಅತ್ಯಂತ ಕ್ರೂರ, ಇಸ್ಲಾಮ್ ನ ಶರಿಯಾದಲ್ಲೂ ಇದನ್ನು ನಿಷೇಧಿಸಲಾಗಿದ್ದು, ದೇಶದ ಕಾನೂನಿನ ಪ್ರಕಾರವೂ ಇದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. 
ಶುಕ್ರವಾರದಂದು ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಯಲ್ಲಿ 6 ಮಕ್ಕಳು ಹತ್ಯೆಯಾಗಿದ್ದು, ಈ ಬೆನ್ನಲ್ಲೇ ಮಗುವಿನಲ್ಲಿ ಬಾಂಬ್ ಇಟ್ಟು ಸ್ಫೋಟಕವನ್ನು ಸಾಗಿಸುತ್ತಿದ್ದ ಘಟನೆಯೂ ನಡೆದಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement