ನವದೆಹಲಿ: ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಐಟಿಬಿಪಿ (ಇಂಡೋ ಟಿಬೆಟ್ ಗಡಿ ಪೊಲೀಸ್) ಪಡೆ ಅತ್ಯುತ್ತಮ ಪಥಸಂಚಲನಕ್ಕಾಗಿ ಟ್ರೋಫಿ ಗೆದ್ದಿದೆ.
2 ವರ್ಷಗಳ ನಂತರ ಐಟಿಬಿಪಿ ಗಣಾರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗಿತ್ತು, ಸಹಾಯಕ ಕಮಾಂಡೆಂಟ್ ಅಕ್ಷಯ್ ದೇಶ್ ಮುಖ್ 148 ಸಿಬ್ಬಂದಿಗಳ ಪಥಸಂಚಲನ ತಂಡದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ಭಾಗಿಯಾಗಿದ್ದ ತಂಡ ಐಟಿಬಿಪಿಯ ಬಹುತೇಕ ಎಲ್ಲಾ ವಿಭಾಗಗಳನ್ನೂ ಪ್ರತಿನಿಧಿಸಿತ್ತು ಎಂದು ಐಟಿಬಿಪಿ ವಕ್ತಾರರು ಹೇಳಿದ್ದಾರೆ.
ಜ.26 ಕ್ಕೂ ಮುನ್ನ ಐಟಿಬಿಪಿ ಪ್ರತಿ ದಿನ 12-14 ಗಂಟೆಗಳ ತಾಲೀಮು ಮಾಡುತ್ತಿತ್ತು, ಎಂದು ಐಟಿಬಿಪಿ ವಕ್ತಾರ ವಿವೇಕ್ ಕೆ ಪಾಂಡೆ ತಿಳಿಸಿದ್ದಾರೆ.