ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ 
ದೇಶ

ಕೇಂದ್ರ ಬಜೆಟ್ 2018: ಕಲಾಪ ದಿನ ಕಡಿತಕ್ಕೆ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಬಜೆಟ್ ಕಲಾಪ ದಿನವನ್ನು ಕಡಿತಗೊಳಿಸಿರುವ ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಸೋಮವಾರ ತೀವ್ರವಾಗಿ ಕಿಡಿಕಾರಿದೆ...

ನವದೆಹಲಿ: ಬಜೆಟ್ ಕಲಾಪ ದಿನವನ್ನು ಕಡಿತಗೊಳಿಸಿರುವ ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಸೋಮವಾರ ತೀವ್ರವಾಗಿ ಕಿಡಿಕಾರಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಜೆಟ್ ಕಲಾಪ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ನಿಲುವು ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ. 
ಕೊನೆ ಕ್ಷಣದಲ್ಲಿ ಮಸೂದೆಗಳನ್ನು ಪ್ರಸ್ತಾಪ ಮಾಡಿ, ಚರ್ಚೆಗೆ ಕಾಲಾವಕಾಶಗಳನ್ನು ನೀಡದೆಯೇ ಮಸೂದೆ ಅಂಗೀಕರಿಸುವಂತೆ ಸಂಸತ್ತಿನ ಮೇಲೆ ಆಡಳಿತಾರೂಢ ಸರ್ಕಾರ ಒತ್ತಡವನ್ನು ಹೇರುತ್ತಿದೆ. ಇದು ನಿಜಕ್ಕೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದು ತಿಳಿಸಿದ್ದಾರೆ. 
ಭಿನ್ನಾಭಿಪ್ರಾಯಗಳಿದ್ದು, ಪ್ರಮುಖ ವಿಚಾರಗಳ ಕುರಿತು ನಾವು ಚರ್ಚೆ ನಡೆಸುವುದಿಲ್ಲ. ಕೊನೆ ಕ್ಷಣದಲ್ಲಿ ಮಸೂದೆಯನ್ನು ಪ್ರಸ್ತಾಪ ಮಾಡುವ ಕೇಂದ್ರ ಸ್ರಕಾರ ಬಳಿಕ ಮೇಲ್ಮನೆಯ ಬಹುಮತದ ಆಧಾರದ ಮೇರೆಗೆ ಮಸೂದೆಯನ್ನು ಅಂಗೀಕರಿಸುತ್ತದೆ. ಕೇವಲ ನಾಲ್ಕು ದಿನಗಳಲ್ಲಿ ಚರ್ಚೆ ನಡೆಸುವುದು ಹೇಗೆ? ಕೇಂದ್ರ ಸರ್ಕಾರ ಕೇವಲ ಕಣ್ಣೊರೆಸುವ ಪ್ರಯತ್ನಗಳ್ನು ಮಾಡುತ್ತಿದೆ. ಬಜೆಟ್ ಅಧಿವೇಶನ ಮಾಡಬೇಕು ಅಷ್ಟೇ... ಅಧಿವೇಶನವನ್ನು ಮಾಡಿ ಚುನಾವಣೆಯತ್ತ ಗಮನಹರಿಸೋಣ ಎನ್ನುವಂತಿದೆ ಕೇಂದ್ರದ ನಿಲುವು. ಬಜೆಟ್ ಅಧಿವೇಶನವನ್ನು ಆಡಳಿತಾರೂಢ ಸರ್ಕಾರ ಸುಲಭವಾಗಿ ತೆಗೆದುಕೊಳ್ಳುತ್ತಿದೆ. ಹಾಗೆಯೇ ಮಸೂದೆಗಳೂ ಚರ್ಚೆಗಳಿಲ್ಲದೆಯೇ ಅಂಗೀಕಾರಗೊಳ್ಳುತ್ತಿವೆ. ನಮ್ಮಲ್ಲಿ ಹೆಚ್ಚಿನ ಬಹುಮತವಿದ್ದು, ನಾವು ಏನನ್ನು ಬೇಕಾದರೂ ಮಾಡಬಹುದು ಎಂದು ತಿಳಿದಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ