ದೆಹಲಿಯಲ್ಲಿ ವಾಯಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರು ಮುಖಕ್ಕೆ ಮಾಸ್ಕ್ ಧರಿಸಿರುವ ಚಿತ್ರ 
ದೇಶ

ಭಾರತದಲ್ಲಿ 47 ಮಿಲಿಯನ್ ಮಕ್ಕಳು ಕಲುಷಿತ ಪ್ರದೇಶದಲ್ಲಿ ವಾಸ :ಗ್ರೀನ್ ಪೀಸ್ ಇಂಡಿಯಾ ವರದಿ

ಭಾರತದಲ್ಲಿ ಐದು ವರ್ಷದೊಳಗಿನ 47 ಮಿಲಿಯನ್ ಮಕ್ಕಳು ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.

ನವದೆಹಲಿ: ಭಾರತದಲ್ಲಿ ಐದು ವರ್ಷದೊಳಗಿನ 47 ಮಿಲಿಯನ್ ಮಕ್ಕಳು ಕಲುಷಿತ  ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.

ಈ ಪೈಕಿ 17 ಮಿಲಿಯನ್ ಮಕ್ಕಳು ವಾಸಿಸುವ ಪ್ರದೇಶದಲ್ಲಿ  ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರಿದ್ದು, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಇಂತಹ ಮಕ್ಕಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ವಾರ್ಷಿಕವಾಗಿ ಪ್ರತಿ ನಿಮಿಷಕ್ಕೆ 10ರ ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ರಾಷ್ಟ್ರೀಯ ವಾಯು ಗುಣಮಟ್ಟ ಪ್ರಮಾಣದ  ವರದಿಯಲ್ಲಿ ಐದು ಬಾರಿ ಕಂಡುಬಂದಿದೆ.

ಇಂತಹ ಪ್ರದೇಶಗಳ ಒಟ್ಟು ಜನಸಂಖ್ಯೆಯಲ್ಲಿ 580 ಮಿಲಿಯನ್ ಜನರು ಗುಣಮಟ್ಟವಿಲ್ಲದ ಗಾಳಿ ಇರುವ ಕಡೆ ವಾಸಿಸುತ್ತಿರುಪುದು ಲಭ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ತಿಳಿದುಬಂದಿದೆ.

ವಾಯಮಾಲಿನ್ಯ ಮಿತಿ ಮೀರಿದ ನಗರಗಳ ಕ್ರಮಾಂಕದಲ್ಲಿ ದೆಹಲಿ, ಫರಿದಾಬಾದ್, ಬಿವಾಡಿ, ಪಾಟ್ನಾ ಅಗ್ರ ಸ್ಥಾನದಲ್ಲಿವೆ. ಈ ವಿಚಾರದಲ್ಲಿ ಉತ್ತರ ಭಾರತದ ನಗರಗಳಿಗೆ ಹೋಲಿಸಿದ್ದರೆ ದಕ್ಷಿಣ ಭಾರತದ ನಗರಗಳು ಉತ್ತಮವಾಗಿವೆ.ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಕ್ಕೆ ತಕ್ಕಂತೆ  ವಾಯುವಿನಲ್ಲಿ ಗುಣಮಟ್ಟ  ಸಾಧಿಸಲು ದಕ್ಷಿಣ ಭಾರತದ ನಗರಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್