ದೇಶ

ನಾಗಲ್ಯಾಂಡ್ ವಿಧಾನಸಭೆಗೆ ಅಧಿಕಾರರೂಢ ನಾಗಾ ಪೀಪಲ್ಸ್ ಫ್ರಂಟ್ ಪಕ್ಷದ 10 ಶಾಸಕರ ರಾಜಿನಾಮೆ

Vishwanath S
ಕೋಹಿಮಾ: ಫೆಬ್ರವರಿ 27ರ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗಲ್ಯಾಂಡ್ ವಿಧಾನಸಭೆಗೆ ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್(ಎನ್ಪಿಎಫ್)ನ ಹತ್ತು ಶಾಸಕರು ರಾಜಿನಾಮೆ ನೀಡಿದ್ದಾರೆ. 
ಮಾಜಿ ಸಂಸದೀಯ ವ್ಯವಹಾರಗಳ ಸಚಿವ ಟೊಖೇಹೋ ಯೆಪ್ಟೋಮಿ, ಮಾಜಿ ರಸ್ತೆಗಳು ಮತ್ತು ಸೇತುವೆಗಳ ಸಚಿವ ನಿಕಿಸಾಲಿ ನಿಕ್ಕಿ ಕಿರ್, ಮಾಜಿ ಪರಿಸರ ಸಚಿವ ನೀಬಾ ಕ್ರೊನು, ಎಸ್ ಪಾಂಗ್ನ್ಯು ಪೋಮ್, ಝಾಲಿಯೊ ರಿಯೊ, ದೇವ್ ನುಕ್ಕು, ಸಿಎಂ ಚಾಂಗ್, ಪೊಹ್ವಾಂಗ್ ಕೊನ್ಯಾಕ್, ನಮ್ರಿ ನಚಾಂಗ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 
ನಾಗಾ ರಾಜಕೀಯ(ಬಂಡಾಯ) ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ದಾರಿ ಮಾಡಿಕೊಡುವ ಚುನಾವಣೆ ಮೊದಲು ಪರಿಹಾರ ಎಂದು ಸಾರ್ವಜನಿಕರು ಕರೆ ನೀಡುತ್ತಿರುವುದರಿಂದ ಶಾಸಕ ಸ್ಥಾನ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇವೆ ಎಂದು ಮಾಜಿ ಸಂಸದೀಯ ವ್ಯವಹಾರಗಳ ಸಚಿವ ಟೊಖೇಹೋ ಯೆಪ್ಟೋಮಿ ಹೇಳಿದ್ದಾರೆ.
SCROLL FOR NEXT