ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!
ನವದೆಹಲಿ: ಭಾರ್ತಿ ಏರ್ ಟೆಲ್ ಹಾಗೂ ರಿಲಾಯನ್ಸ್ ಜೊಯೋ ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಸುಮಾರು 74,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿವೆ ಎಂದು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರ್ ರಾಜನ್ ಹೇಳಿದ್ದಾರೆ.
ಮೊಬೈಲ್ ಟವರ್ ಗಳನ್ನು ಸ್ಥಾಪಿಸುವುದಕ್ಕೆ ಜಾಗದ ಕೊರತೆ ಸೇರಿದಂತೆ ಟೆಲಿಕಾಂ ಸಂಸ್ಥೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ, ಕಾಲ್ ಡ್ರಾಪ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರ್ತಿ ಏರ್ ಟೆಲ್ ಸಂಸ್ಥೆಯವರು ಮೂಲಸೌಕರ್ಯಕ್ಕಾಗಿ 16 ಸಾವಿರ ಕೋಟಿ ರೂಪಾಯಿ ಹಾಗೂ 24,000 ಕೋಟಿ ರೂಪಾಯಿಯನ್ನು ಇನ್ನಿತರ ಉದ್ದೇಶಕ್ಕಾಗಿ ಹೂಡಿಕೆ ಮಾಡುವುದಾಗಿ ಹೇಳಿದೆ.
ರಿಲಾಯನ್ಸ್ ಜಿಯೋ ಮುಂಬರುವ ಹಣಕಾಸು ವರ್ಷದಲ್ಲಿ 50,000 ರೂಪಾಯಿಗಳನ್ನು 1 ಲಕ್ಷ ಟವರ್ ಗಳನ್ನು ಸ್ಥಾಪಿಸುವುದಕ್ಕಾಗಿಯೇ ಖರ್ಚು ಮಾಡಲು ತೀರ್ಮಾನಿಸಿದ್ದು, ಐಡಿಯಾ ವೋಡೊಫೋನ್ ಸಹ ಕಾಲ್ ಡ್ರಾಪ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಂದು ಸುಂದರ್ ರಾಜನ್ ಟೆಲಿಕಾಂ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.