ನವದೆಹಲಿ: ದೆಹಲಿಯ ಸದಾರ್ ಬಜಾರ್ ಪ್ರದೇಶ ಉತ್ತರಪ್ರದೇಶದ ಪಟ್ಟಣಗಳಂತೆ ಹಿಂದುಳಿದಿದೆ ಎಂದು ಕೇಂದ್ರ ಸಚಿವ ವಿಜಯ್ ಗೋಯೆಲ್ ಹೇಳಿಕೆ ನೀಡಿದ್ದು ಇದು ಬಿಜೆಪಿ ಪಕ್ಷ ಪೇಚಿಕೆ ಸಿಲುಕುವಂತೆ ಮಾಡಿದೆ.
ಪುರಸಭೆ ನಿಗಮಗಳ ವಿರುದ್ಧ ದೆಹಲಿಯ ಹಳೆಯ ವ್ಯಾಪಾರಿಗಳು ಮತ್ತು ಅಂಗಡಿಯವರು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ವಿಜಯ್ ಗೋಯೆಲ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ.
ದೆಹಲಿ ಸ್ಥಿತಿಯನ್ನು ನೀವು ನೋಡಿದ್ದೀರಾ? ವಿದ್ಯುತ್ ತಂತಿಗಳು ತೂಗಾಡುತ್ತಿವೆ. ಮನೆಗಳು ಕೆಟ್ಟ ಸ್ಥಿತಿಯಲ್ಲಿದ್ದು ಬಿಳುವಂತಾ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯ ಸದಾರ್ ಬಜಾರ್ ನಲ್ಲಿ ನಿಂತರೆ ಉತ್ತರ ಪ್ರದೇಶದ ಕೆಲವು ಹಿಂದುಳಿದ ಪ್ರದೇಶಗಳಲ್ಲಿ ನಾವು ನಿಂತಿರುವಂತೆ ತೋರುತ್ತಿದೆ. ಸದಾರ್ ದೆಹಲಿಯ ಹೆಮ್ಮೆಯ ಪ್ರತೀಕ ಎಂದು ವಿಜಯ್ ಗೋಯಲ್ ಹೇಳಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ ವಿಜಯ್ ಗೋಯಲ್ ಅವರು 1996ರಿಂದ 1998ರವರೆಗೆ ದೆಹಲಿಯ ಸದಾರ್ ಬಜಾರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಎದುರಿಸಿದ್ದರು.