ದೇಶ

ಲೋಕಸಭೆ ಸಂಸದರು ದಿನವೊಂದಕ್ಕೆ ಗರಿಷ್ಠ 5 ಪ್ರಶ್ನೆ ಮಾತ್ರ ಕೇಳಬೇಕು !

Nagaraja AB

ನವದೆಹಲಿ: ಮುಂದಿನ ಅಧಿವೇಶನದಿಂದ ಲೋಕಸಭೆಯ ಸಂಸದರು ದಿನವೊಂದಕ್ಕೆ ಗರಿಷ್ಠ 5 ಪ್ರಶ್ನೆಗಳನ್ನಷ್ಟೇ ಕೇಳಬೇಕಾಗಿದೆ. ಈವರೆಗೂ 10 ಪ್ರಶ್ನೆಗಳನ್ನು ಕೇಳಬಹುದಾಗಿತ್ತು. ಹೊಸ ನಿಯಮ ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ.

ಲೋಕಸಭೆಯ ಸ್ಪೀಕರ್ ನಿರ್ದೇಶನದಿಂದ ದಿನವೊಂದಕ್ಕೆ 10ಕ್ಕಿಂತ ಹೆಚ್ಚು ಪ್ರಶ್ನೆ ಕೇಳಲು ನೋಟಿಸ್ ಕೊಡಬಾರದು ಎಂದು ಲೋಕಸಭಾ ಪ್ರಶ್ನಾವಳಿ ಘಟಕದ ವರದಿಯಲ್ಲಿ ತಿಳಿಸಲಾಗಿದೆ. ಪ್ರತಿದಿನ 230ಕ್ಕೂ ಹೆಚ್ಚು ಪ್ರಶ್ನೆಗಳ ನೋಟಿಸ್ ಬರುತ್ತಿದ್ದರಿಂದ  ಸ್ಪೀಕರ್ ನಿರ್ದೇಶನದ 10 ಬಿಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೊಸ ತಿದ್ದುಪಡಿಯಂತೆ ಪ್ರತಿ ದಿನ ಸಂಸದರು 10ಕ್ಕಿಂತ  ಗರಿಷ್ಠ 5 ಪ್ರಶ್ನೆಗಳ ನೋಟಿಸ್ ಮಾತ್ರ ನೀಡಬಹುದಾಗಿದೆ ಎಂಬ ವರದಿಗೆ  ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ  ಸಹಿ ಮಾಡಿದ್ದಾರೆ.
ಒಂದು ವೇಳೆ ಐದಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಕೇಳಲು ಸಂಸದರಿಗೆ ಅವಕಾಶ ಮಾಡಿಕೊಟ್ಟರೆ  ಉಳಿದ ದಿನಗಳಲ್ಲಿ ಪ್ರಶ್ನೆಗಳನ್ನು ಕೇಳಲು ಅವಕಾಶವಿದೆ ಎಂದು ತಿಳಿಸಲಾಗಿದೆ.ಸ್ಪೀಕರ್ ಹೊಸ ಆದೇಶ ಮುಂದಿನ ಅಧಿವೇಶನದಿಂದ ಜಾರಿಗೆ ಬರಲಿದೆ.  16ನೇ ಲೋಕಸಭೆಯ 15 ನೇ ಅಧಿವೇಶನದಿಂದ ಇದು ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
SCROLL FOR NEXT