ದೇಶ

ಮರ್ಸಿಡಿಸ್ ಮತ್ತು ಹಾಲು ಒಂದೇ ದರಕ್ಕೆ ಸಿಗುವುದೇ: ಜಿಎಸ್‌ಟಿ ಟೀಕಾಕಾರರಿಗೆ ಮೋದಿ ಪ್ರಶ್ನೆ

Vishwanath S
ನವದೆಹಲಿ: ಮರ್ಸಿಡಿಸ್ ಬೆಂಝ್ ಕಾರು ಮತ್ತು ಹಾಲು ಒಂದೇ ದರಕ್ಕೆ ಸಿಗುವುದೇ? ಎಲ್ಲ ಉತ್ಪನ್ನಗಳನ್ನು ಒಂದೇ ತೆರಿಗೆ ಸ್ಲ್ಯಾಬ್ ನಡಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 
ಜಿಎಸ್ಟಿ ಜಾರಿಯಾಗಿ ಒಂದು ವರ್ಷದ ಸಂಭ್ರಮಾಚರಣೆ ವೇಳೆ ಜಿಎಸ್ಟಿ ಕುರಿತಂತೆ ವ್ಯಕ್ತವಾದ ಟೀಕೆಗಳಿಗೆ ಪ್ರಧಾನಿ ಮೋದಿ ಈ ರೀತಿ ಪ್ರಶ್ನಿಸಿದ್ದಾರೆ. 
ಜಿಎಸ್ಟಿ ಕುರಿತಂತೆ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ ಮೋದಿ ಅವರು, ವರ್ಷದ ಹಿಂದೆ ಜಿಎಸ್ಟಿ ಜಾರಿಗೊಳಿಸುವಾಗ ಇದೊಂದು ಉತ್ತಮ ಮತ್ತು ಸರಳ ತೆರಿಗೆ ಎಂದು ವ್ಯಾಖ್ಯಾನಿಸಿದ್ದೀರಿ, ಆದರೆ ಇದೊಂದು ಸಂಕೀರ್ಣ ತೆರಿಗೆ ವ್ಯವಸ್ಥೆ, ಒಂದೇ ತೆರಿಗೆ ದರ ನಿಗದಿಯಾಗಬೇಕು ಎಂದು ಟೀಕಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಒಂದು ಸ್ಲ್ಯಾಬ್ ನಲ್ಲಿ ಶೂನ್ಯ ತೆರಿಗೆ ಇದ್ದರೆ ಆಹಾರ ವಸ್ತುಗಳಿಗೆಲ್ಲ ಅದೇ ಅನ್ವಯವೆಂದು ಅರ್ಥವಲ್ಲ. ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ, ಕಾಂಗ್ರೆಸ್ ಸೇರಿದಂತೆ ಹಲವರು ಒಂದೇ ತೆರಿಗೆ ದರ ಬೇಕು ಎನ್ನುತ್ತಿದ್ದಾರೆ ಎಂದು ಹೇಳಿದರು. 
ಜಿಎಸ್ಟಿ ಜಾರಿಯಿಂದ ಲಾಜಿಸ್ಟಿಕ್ ಇಂಡಸ್ಟ್ರಿ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಗೋಚರಿಸುತ್ತಿದೆ. ಚೆಕ್ ಪೋಸ್ಟ್ ವ್ಯವಸ್ಥೆ ರದ್ದುಗೊಳ್ಳುತ್ತಿದ್ದು ಇದರಿಂದ ಸಮಯ, ಸಂಪನ್ಮೂಲ, ಹಣ ಉಳಿತಾಯವಾಗುತ್ತದೆ. ಇದು ದೇಶದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದರು.
SCROLL FOR NEXT