ದೇಶ

ಪತ್ರಕರ್ತರು ನ್ಯಾಯಾಲಯದೊಳಗೆ ಮೊಬೈಲ್ ಕೊಂಡೊಯ್ಯಲು ಸುಪ್ರೀಂ ಅನುಮತಿ

Nagaraja AB

ನವದೆಹಲಿ: ಮಾನ್ಯತೆ ಪಡೆದ ಅಥವಾ ಪಡೆಯದೆ ಇರುವ ಪತ್ರಕರ್ತರು ನ್ಯಾಯಾಲಯದೊಳಗೆ  ಮೊಬೈಲ್ ಕೊಂಡೊಯ್ಯಲು ಸುಪ್ರೀಂಕೋರ್ಟ್  ಅನುಮತಿ ನೀಡಿದೆ. ಆದರೆ. ಮೊಬೈಲ್ ಗಳನ್ನು ಸೈಲೆಂಟ್ ಮೊಡ್ ನಲ್ಲಿ ಇಡುವಂತೆ  ಸೂಚನೆ ನೀಡಲಾಗಿದೆ.

ಪೋನ್ ಬಳಕೆದಾರರಿಂದ ಯಾವುದೇ ರೀತಿಯ ಅಡಚಣೆ ಉಂಟಾದ್ದರೆ ಅವುಗಳನ್ನು  ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಮೊಬೈಲ್ ಪೋನ್ ಬಳಕೆಗೆ ಅವಕಾಶ ನೀಡುವ ಸುತ್ತೋಲೆಯನ್ನು ಸುಪ್ರೀಂಕೋರ್ಟಿನಲ್ಲಿ ಇಂದು  ಮೊದಲಿಗೆ ಓದಲಾಯಿತು. ಮಾಧ್ಯಮ ಪ್ರತಿನಿಧಿಗಳಿಗೆ  ಮೊಬೈಲ್ ಬಳಕೆಗೆ ಅನುಮತಿ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದ್ದು, ನೋಂದಣಿಯಾದ ಆರು ತಿಂಗಳ ಪಾಸ್ ಹೊಂದಿರುವವರು ನ್ಯಾಯಾಲಯದೊಳಗೆ ಪೋನ್ ಕೊಂಡೊಯ್ದು ಸೈಲೆಂಟ್ ಮೊಡ್ ನಲ್ಲಿಡಬೇಕು ಎಂದು  ತಿಳಿಸಲಾಯಿತು.

ಇದೇ ಮೊದಲ ಬಾರಿಗೆ ವಿಭಾಗೀಯ  ನ್ಯಾಯಾಲಯ  ನ್ಯಾಯಾಲಯದೊಳಗೆ ಮೊಬೈಲ್ ಪೋನ್ ಬಳಕೆ ಅವಕಾಶ ನೀಡಿದೆ. ಇದರಿಂದ ಪತ್ರಕರ್ತರು ನ್ಯಾಯಾಲಯದ ಕಾರ್ಯಕಲಾಪಗಳನ್ನು ಕ್ಷಿಪ್ರವಾಗಿ ವರದಿ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


SCROLL FOR NEXT