ದೇಶ

ಮಾದಕ ದ್ರವ್ಯ ಮಾರಾಟಗಾರರಿಗೆ ಮರಣ ದಂಡನೆ , ಅಮರಿಂದರ್ ಕೇಂದ್ರಕ್ಕೆ ಶಿಫಾರಸ್ಸು

Nagaraja AB

ಅಮೃತಸರ :  ಮಾದಕ ದ್ರವ್ಯ ಮಾರಾಟಗಾರರಿಗೆ ಮರಣ ದಂಡನೆ ಶಿಕ್ಷೆಗೊಳಪಡಿಸುವಂತೆ ಪಂಜಾಬ್ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರಿಂದರ್ ಸಿಂಗ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್   ಅವರಿಗೆ ಶಿಫಾರಸ್ಸು ಮಾಡಿ ಪತ್ರ ಬರೆದಿದ್ದಾರೆ.

1985ರ ನಾರ್ಕಟಿಕ್  ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್  ಸಬ್ ಟೆನ್ಸ್ ಕಾಯ್ದೆಗೆ  ತಿದ್ದುಪಡಿ ಪ್ರಕ್ರಿಯೆ ಸಂಬಂಧ ಕೇಂದ್ರಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ  ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅಮರಿಂದರ್ ಸಿಂಗ್ ಈ ರೀತಿಯ ಶಿಫಾರಸ್ಸು ಮಾಡಿದ್ದಾರೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳವಂತೆ  ಅಮರಿಂದರ್ ಸಿಂಗ್ ಕೇಂದ್ರಸರ್ಕಾರವನ್ನು  ಒತ್ತಾಯಿಸಿದ್ದಾರೆ. ಕೆಲವು ಅಪರಾಧಗಳನ್ನು ಎರಡು ಬಾರಿ ಮಾಡಿದ್ದರೆ ಅಂತಹುಗಳಿಗೆ ಎನ್ ಡಿಪಿಎಸ್ ಕಾಯ್ದೆ ಪ್ರಕಾರ  ಮರಣ ದಂಡನೆ ವಿಧಿಸಲು ಅವಕಾಶ ಇರುವುದಾಗಿ  ಅಮರಿಂದರ್ ಸಿಂಗ್ ಗಮನ ಸೆಳೆದಿದ್ದಾರೆ.

ಮಾದಕ ದ್ರವ್ಯ ಮಾರಾಟ  ರಾಜ್ಯದ  ಸಾಮಾಜಿಕ ಆರ್ಥಿಕ ಅಭಿವೃದ್ದಿಗೆ ಪ್ರಮುಖ ತೊಡಕಾಗಿ ಪರಿಣಮಿಸಿದ್ದು, ಸಮಾಜ ಹಾಗೂ ಯುವಕರ ಭವಿಷ್ಯ ಹಾಳು ಮಾಡುವ ಇಂತಹ ಅಪರಾಧ ಚಟುವಟಿಕೆಗಳಿಂದ ದೂರ ಇರಲು ಮರಣ ದಂಡನೆ  ಶಿಕ್ಷೆ ಜಾರಿಯಾಗಬೇಕು ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT