ಕುಂಭ ಮೇಳ: ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗ ತೆರವುಗೊಳಿಸಿದ ಮುಸ್ಲಿಮರು 
ದೇಶ

ಕುಂಭ ಮೇಳ: ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗ ತೆರವುಗೊಳಿಸಿದ ಮುಸ್ಲಿಮರು

ಉತ್ತರಪ್ರದೇಶದ ಹಳೆಯ ಅಲಹಾಬಾದ್ನಲ್ಲಿ ಹಿಂದೂ-ಮುಸ್ಲಿಮರು ಏಕತೆಯನ್ನು ಸಾರಿದ್ದು, ಕುಂಭ ಮೇಳ ಹಿನ್ನೆಲೆಯಲ್ಲಿ ಸರ್ಕಾರದ ರಸ್ತೆ ಅಗಲೀಕರಣ ಯೋಜನೆಗೆ ಸಹಕಾರವನ್ನು ನೀಡಿದ್ದು, ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ...

ಅಲಹಾಬಾದ್: ಉತ್ತರಪ್ರದೇಶದ ಹಳೆಯ ಅಲಹಾಬಾದ್ನಲ್ಲಿ ಹಿಂದೂ-ಮುಸ್ಲಿಮರು ಏಕತೆಯನ್ನು ಸಾರಿದ್ದು, ಕುಂಭ ಮೇಳ ಹಿನ್ನೆಲೆಯಲ್ಲಿ ಸರ್ಕಾರದ ರಸ್ತೆ ಅಗಲೀಕರಣ ಯೋಜನೆಗೆ ಸಹಕಾರವನ್ನು ನೀಡಿದ್ದು, ಸ್ವಇಚ್ಛೆಯಿಂದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ. 
ಮುಂದಿನ ವರ್ಷ ಅಲಹಾಬಾದ್'ನ ಸಂಗಂನಗರಿಯಲ್ಲಿ ಕುಂಭಮೇಳ ನಡೆಯುತ್ತಿದ್ದು, ಇದಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳೆ ಸೂಚನೆ ನೀಡಿದ್ದಾರೆ. ಇದರ ಅಡಯಲ್ಲಿ ಅಲಹಾಬಾದ್'ನ ಕೆಲವು ರಸ್ತೆಗಳನ್ನು ಅಗಲೀಕರಣ ಮಾಡುವ ಕಾರ್ಯಗಳು ನಡೆಯುತ್ತಿದೆ. 
 ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳು ಆಯ್ಕೆ ಮಾಡಿಕೊಂಡಿರುವ ಪ್ರದೇಶಗಳು ಜನನಿಬಿಡ ಪ್ರದೇಶಗಳಾಗಿದ್ದು, ಅಗಲೀಕರಣ ಮಾಡಬೇಕಾಗಿರುವ ರಸ್ತೆಗಳಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳಲ್ಲಿ ಕೆಲ ಗೊಂದಲಗಳು ಮೂಡಿದ್ದವು. 
ಇದೀಗ ಗೊಂದಲಗಳಿಗೆ ಮುಸ್ಲಿಮರು ತೆರೆ ಎಳೆದಿದ್ದು, ಸ್ವಇಚ್ಛೆಯಿಂದಲೇ ರಸ್ತೆ ಅಗಲೀಕರಣಕ್ಕೆ ಸಹಾಯ ಮಾಡಿದ್ದಾರೆ. ಇದರಂತೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಮಸೀದಿಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ