ದೇಶ

ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಿ: ಪ್ರವೀಣ್ ತೊಗಾಡಿಯಾ ಆಗ್ರಹ

Lingaraj Badiger
ಜೈಪುರ: ಮುಸ್ಲಿಮರ ಅಲ್ಪ ಸಂಖ್ಯಾತ ಮಾನ್ಯತೆಯನ್ನು ರದ್ದುಗೊಳಿಸಬೇಕು ಮತ್ತು ಅವರ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ಮಿತಿ ಹೇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಅವರು ಬುಧವಾರ ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೊಗಾಡಿಯಾ, ಈ ಕೂಡಲೇ ಮುಸ್ಲಿಮರ ಅಲ್ಪ ಸಂಖ್ಯಾತ ಮಾನ್ಯತೆ ಹಿಂಪಡೆಯಬೇಕು ಮತ್ತು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮುಸ್ಲಿಮರಿಗಾಗಿ ಖರ್ಚು ಮಾಡಬಾರದು. ಅದರ ಬದಲು ಇತರೆ ಸಮುದಾಯದ ಬಡವರ ಕಲ್ಯಾಣಕ್ಕಾಗಿ ಖರ್ಚು ಮಾಡಲಿ ಎಂದು ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ಹಿಂದೂ ಪರಿಷತ್ ಸ್ಥಾಪಿಸಿದ ತೊಗಾಡಿಯಾ ಹೇಳಿದ್ದಾರೆ.
ನಮ್ಮ ನೂತನ ಸಂಘಟನೆ ರಾಜಕೀಯದ ಮೇಲೆ ಪ್ರಭಾವ ಬೀರಲು ದೇಶದಲ್ಲಿ 20 ಕೋಟಿ ಹಿಂದೂಗಳ ಮತ ಬ್ಯಾಂಕ್ ಅನ್ನು ಸೃಷ್ಟಿಸಲಿದೆ ಎಂದು ತೊಗಾಡಿಯಾ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿವಾದಾತ್ಮಕ ನಾಯಕ, ಹಣದುಬ್ಬರ, ರೈತರ ಆತ್ಮಹತ್ಯೆ ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
SCROLL FOR NEXT