ದೇಶ

ದೇಶದ್ರೋಹ ಆರೋಪ: ಉಮರ್ ಖಲೀದ್, ಕನ್ಹಯ ಕುಮಾರ್ ಶಿಕ್ಷೆ ನಿರ್ಧಾರ ಎತ್ತಿಹಿಡಿದ ಜೆಎನ್ ಯು

Raghavendra Adiga
ನವದೆಹಲಿ: ಫೆಬ್ರವರಿ 9, 2016 ರ ಘಟನೆಗೆ ಸಂಬಂಧಿಸಿ ಕನ್ಹಯ ಕುಮಾರ್ ಗೆ 10 ಸಾವಿರ ದಂಡ ವಿಧಿಸಿರುವ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್ ಯು) ಉನ್ನತ ತನಿಖಾ ಸಮಿತಿ ಉಮರ್ ಖಾಲಿದ್ ನ ಸಂಬಂಧ ತನ್ನ ನಿರ್ಧಾರವನ್ನು  ಎತ್ತಿ ಹಿಡಿದಿದೆ.
2016ರಲ್ಲಿ ಸಂಸತ್ತು ದಾಳಿಯ ಆರೋಪಿ ಅಫ್ಝಲ್ ಗುರುವಿನ ಮರಣದಂಡನೆ ವಿಚಾರವಾಗಿ ಜೆಎನ್ ಯು ನ ಖಲೀದ್ ಮತ್ತು ಇನ್ನಿತರ ವಿದ್ಯಾರ್ಥಿಗಳು ವಿದ್ಯಾರ್ಥಿ ನಾಯಕ ಕನ್ಹಯ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ತನಿಖಾ ಸಮಿತಿ ಈ ಪ್ರಕರಣದ ವಿಚಾರಣೆ ನಡೆಸಿದ್ದು ಕನ್ಹಯ ಅವರಿಗೆ 10 ಸಾವಿರ ರು. ದಾಂಡ ವಿಧಿಸಿದೆ.
ಅದೇ ವೇಳೆ ಶಿಸ್ತು ಕ್ರಮದ ಉಲ್ಲಂಘನೆ ಸಂಬಂಧ ಸಮಿತಿಯು ಇತರೆ 13 ವಿದ್ಯಾರ್ಥಿಗಳ ಮೇಲೆ ಸಹ ದಂಡ ಹಾಕಿದ್ದು ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ದೆಹಲಿ ಹೈ ಕೋರ್ಟ್ ಮೊರೆ ಹೋಗಿದ್ದರು.ಆದರೆ ನ್ಯಾಯಾಲಯವು ಸಮಿತಿಯ ನಿರ್ಧಾರವನ್ನು ಮೇಲ್ಮನವಿ ಪ್ರಾಧಿಕಾರವು ಪರಿಶೀಲನೆ ನಡೆಸಬೇಕೆಂದು ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿತ್ತು.
ಮೂಲದ ಪ್ರಕಾರ ಸಮಿತಿಯು ಖಲೀದ್ ಮತ್ತು ಕುಮಾರ್ ಸಂಬಂಧ ತನ್ನ ನಿರ್ಧಾರವನ್ನು ಎತ್ತಿ ಹಿಡಿದಿದೆ."ಕೆಲವು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ" ಎಂದು ತಿಳಿದುಬಂದಿದೆ.
ರಾಷ್ಟ್ರ ವಿರೋಧಿ ಘೊಷಣೆ ಕೂಗಿದರೆನ್ನುವ ಕಾರಣದಲ್ಲಿ ಕುಮಾರ್, ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ.ಅವರನ್ನು  ಫೆಬ್ರವರಿ 2016ರಲ್ಲಿ ಬಂಧಿಸಲಾಗಿತ್ತು.ದೇಶದ್ರೋಹದ ಆರೋಪದ ಮೇಲೆ ಅವರ ಬಂಧನವಾಗಿ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ವಿದ್ಯಾರ್ಥಿ ನಾಯಕರ ಬಂಧನ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
SCROLL FOR NEXT