ನವದೆಹಲಿ: ಶಶಿ ತರೂರ್ ತಿಹಾರ್ ಜೈಲಿನಲ್ಲೇನೂ ಇಲ್ಲ. 'ಬೇಲ್ ವಾಲಾ'ಗಳಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಪಕ್ಕ ಕುಳಿತುಕೊಳ್ಳಬಹುದು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಗುರುವಾರ ಹೇಳಿದ್ದಾರೆ.
ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಜಾಮೀನು ಮಂಜೂರು ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶಶಿ ತರೂರ್ ಸಂಭ್ರಮ ಪಡುವಂತಹದ್ದೇನು ಇಲ್ಲ, ಅವರೇನು ತಿಹಾರ್ ಜೈಲಿನಲ್ಲಿಲ್ಲ. 'ಬೇಲ್ ವಾಲಾ'ಗಳಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ಪಕ್ಕ ಕೂಡ ಕುಳಿತುಕೊಳ್ಳಬಹುದು ಎಂದು ಹೇಳಿದ್ದಾರೆ.
ಶಶಿ ತರೂರ್ ಅವರು ದೇಶ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಸೂಚನೆ ನೀಡಿದ್ದು, ವಿಶ್ವದ ಇತರೆ ಭಾಗಗಳಲ್ಲಿರುವ ಶಶಿ ತರೂರ್ ಅವರ ಪ್ರಿಯತಮೆಯರನ್ನು ನೋಡಬಹುದು ಎಂದು ವ್ಯಂಗ್ಯವಾಡಿದ್ದಾರೆ.