ಪಶ್ಚಿಮ ಬಂಗಾಳ: ಸಿಐಡಿ ಪೋಲೀಸರಿಂದ ನಾಲ್ವರು ಭಯೋತ್ಪಾದಕರ ಬಂಧನ
ಪಶ್ಚಿಮ ಬಂಗಾಳ ಸಿಲಿಗುರಿಯ ಸಿಐಡಿ ಪೋಲೀಸ್ ತಂಡ ಸಿಲಿಗುರಿ ನಕ್ಸಲ್ಬಾರಿಯಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದೆ.
ನಕ್ಸಲ್ಬಾರಿರಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಸಿಲಿಗುರಿಯ ಸಿಐಡಿ ಪೋಲೀಸ್ ತಂಡ ಸಿಲಿಗುರಿ ನಕ್ಸಲ್ಬಾರಿಯಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದೆ.
ಬಂಧಿತರನ್ನು ನಿರ್ಮಲ್ ರಾಮ್, ಕಂದರ್ಪ ದಾಸ್, ರತನ್ ಅಧಿಕಾರಿ ಹಾಗೂ ರಿಪಿ ಪ್ರಸಾದ್ ರಾಯ್ ಎಂದು ಗುರುತಿಸಲಾಗಿದೆ.
ನಿರ್ಮಲ್ ರಾಯ್ ಇತ್ತೀಚೆಗೆ ಗ್ರೇಟರ್ ಕೋಚ್ ಬಿಹಾರ್ ಲ್ಲಿಬರಲೈಸೇಷನ್ ಆರ್ಗನೈಸೇಷನ್ ಹೆಸರಿನ ಭಯೋತ್ಪಾದಕ ಸಂಘಟನೆಯನ್ನು ಸಂಘಟಿಸಿದ್ದನು. ಎಂದು ಸಿಐಡಿ ಮೂಲಗಳು ಹೇಳಿದೆ.
ಸಶಸ್ತ್ರ ಬಂಡಾಯದ ಮೂಲಕ ಗ್ರೇಟರ್ ಕೋಚ್ ಬಿಹಾರ್ ಪ್ರತ್ಯೇಕ ರಾಜ್ಯ ಸ್ಥಾಪನೆ ಈ ಉಗ್ರ ಸಂಘಟನೆಯ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.