ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉಗ್ರ ಸಂಘಟನೆ ಸೇರಿದ ಐಪಿಎಸ್ ಅಧಿಕಾರಿಯ ಕಿರಿಯ ಸಹೋದರ

ಕಾಶ್ಮೀರದಲ್ಲಿ ಯುವಕನೋರ್ವ ಭಯೋತ್ಪಾದಕ ಸಂಘಟನೆಗೆ ಸೇರಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿಯ ಕಿರಿಯ ಸಹೋದರ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿರುವ ಬಗ್ಗೆ ವರದಿಗಳಾಗಿವೆ.

ಉಗ್ರ ಸಂಘಟನೆ ಸೇರಿದ ಐಪಿಎಸ್ ಅಧಿಕಾರಿಯ ಕಿರಿಯ ಸಹೋದರ
Srinivas Rao BV
Updated On : 9 Jul 2018, 11:35 am
ಶ್ರೀನಗರ: ಕಾಶ್ಮೀರದಲ್ಲಿ ಯುವಕನೋರ್ವ ಭಯೋತ್ಪಾದಕ ಸಂಘಟನೆಗೆ ಸೇರಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿಯ ಕಿರಿಯ ಸಹೋದರ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿರುವ ಬಗ್ಗೆ ವರದಿಗಳಾಗಿವೆ. 
ಯುನಾನಿ ವೈದ್ಯ ಹಾಗೂ ಶಸ್ತ್ರಚಿಕಿತ್ಸೆ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿದ್ದ ಐಪಿಎಸ್ ಅಧಿಕಾರಿಯ ಕಿರಿಯ ಸಹೋದರ ಶಮ್ಸುಲ್-ಹಕ್ ಮೆಂಗ್ನೂ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿಯಾಗಿದ್ದು, ಮೇ.22 ರಂದು ಕಾಶ್ಮೀರ ವಿವಿ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
ಈ ನಡುವೆ ಇತ್ತೀಚಿನ ದಿನಗಳಲ್ಲಿ ತನ್ನ ಉಗ್ರ ಸಂಘಟನೆ ಸೇರಿರುವ ಯುವಕರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದ ಶಮ್ಸೂಲ್-ಹಕ್-ಮೆಂಗ್ನೂ ಫೋಟೊ ಸಹ ಇದ್ದು, ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. 

Advertisement

Advertisement

ಉಗ್ರ ಸಂಘಟನೆ ಸೇರಿರುವ ಯುವಕನ ಹಿರಿಯ ಸಹೋದರ 2012 ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದು, ಈಶಾನ್ಯ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಬುರ್ಹನ್ ವಾನಿಯ ಸಾವಿನ ವಾರ್ಷಿಕ ದಿನದ ನೆನಪಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ತನ್ನ ಸಂಘಟನೆಯನ್ನು ಸೇರಿರುವ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement