ದೇಶ

ರಾಜ್ಯಸಭಾ ಸದಸ್ಯ ಅಹಮದ್ ಪಟೇಲ್ ಗೆ ಸುಪ್ರೀಂ ಕೋರ್ಟ್ ನೋಟೀಸ್

Raghavendra Adiga
ನವದೆಹಲಿ: ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರಿಗೆ ಸುಪ್ರೀಂ ಕೋರ್ಟ್ ನೋತೀಸ್ ಜಾರಿ ಮಾಡಿದೆ. 
ಅಹಮದ್ ಪಟೇ;ಲ್ ಆಯ್ಕೆಯನ್ನು ರದ್ದುಗೊಳಿಸಲು ಕೋರಿ ಬಿಜೆಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಂಬಂಧ ಪ್ರತಿಕ್ರಿಯೆ ನೀಡಬೇಕೆಂದು ಪಟೇಲ್ ಅವರಿಗ ನೋಟೀಸ್ ಜಾರಿ ಮಾಡಿದೆ.
ಚುನಾವಣೆ ವೇಳೆ ಶಾಸಕರನ್ನು ಅನಧಿಕೃತವಾಗಿ ಇರಿಸಿಕೊಂಡಿದ್ದಲ್ಲದೆ ಅವರಿಗೆ ಭಯ ಮೂಡಿಸಿ ತಮ್ಮ ಪರವಾಗಿ ಮತ ಹಾಕುವಂತೆ ಮಾಡಲಾಗಿತ್ತು ಎಂದು ಬಿಜೆಪಿ ಮುಖಂಡ ಬಲ್ವಂತ್ ಸಿಂಗ್ ರಜಪೂತ್ ಕೋರ್ಟ್ ಮೆಟ್ಟಿಲೇರಿದ್ದರು. ಅಹಮದ್ ಪಟೇಲ್ ಚುನಾವಣೆ ಅಕ್ರಮ ನಡೆಸಿದ್ದಾರೆಂದು ಅವರು ಆಆರೋಪಿಸಿದ್ದರು.
ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಪಟೇಲ್ ಅವರಿಗೆ ನೋಟೀಸ್ ನೀಡಿರುವುದಲ್ಲದೆ ಗುಜರಾತ್ ಹೈಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಬೇಕೆಂದು ಆದೇಶಿಸಿದೆ.
ಕಳೆದ ವರ್ಷ ನಡೆದಿದ್ದ ರಾಜ್ಯ ಸಭೆ ಚುನಾವಣೆಯಲ್ಲಿ ಗುಜರಾತಿನಿಂದ ಸ್ಪರ್ಧಿಸಿದ್ದ ಅಹಮದ್ ಪಟೇಲ್ಲ್ 44 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.
SCROLL FOR NEXT