ಸಾಂದರ್ಭಿಕ ಚಿತ್ರ 
ದೇಶ

ಬಿಹಾರ; ಆರ್'ಜೆಡಿ ನಾಯಕನ ತಲೆಕಡಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ರಾಷ್ಟ್ರೀಯ ಜನತಾ ದಳ (ಆರ್'ಜೆಡಿ) ನಾಯಕರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರ ರಾಜ್ಯದ ನವಡಾ ಪ್ರದೇಶದಲ್ಲಿ ನಡೆದಿದೆ...

ಪಾಟ್ನಾ; ರಾಷ್ಟ್ರೀಯ ಜನತಾ ದಳ (ಆರ್'ಜೆಡಿ) ನಾಯಕರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರ ರಾಜ್ಯದ ನವಡಾ ಪ್ರದೇಶದಲ್ಲಿ ನಡೆದಿದೆ. 
ಕೈಲಾಶ್ ಪಾಸ್ವಾನ್ ಹತ್ಯೆಯಾದ ಆರ್'ಜೆಡಿ ನಾಯಕರಾಗಿದ್ದಾರೆ, ಪಾಸ್ವಾನ್ ಅವರು ಆರ್'ಜೆಡಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 
ಪಾಸ್ವಾನ್ ಅವರ ಮೃತದೇಹವನ್ನು ಪೊಲೀಸರು ನಳಂದಾ ಜಿಲ್ಲೆಯ ಖುದಗಂಜ್ ಪ್ರದೇಶದಲ್ಲಿರುವ ಪೈಮರ್ ನದಿ ಬಳಿಯಿರುವ ಸೇತೆ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಸ್ವಾನ್ ಅವರ ಕುಟುಂಬಸ್ಥರು, ಪಂಚಾಯತ್ ಸಭೆಗಾಗಿ ಬುಚ್ಛಿ ಎಂಬ ಗ್ರಾಮಕ್ಕೆ ಛೋಟೂ ಗುಪ್ತಾ ಎಂಬ ವ್ಯಕ್ತಿ ಜು.6 ರಂದು ಪಾಸ್ವಾನ್ ಅವರನ್ನು ಕರೆದುಕೊಂಡು ಹೋಗಿದ್ದ. ಇದಾದ ಬಳಿಕ ಪಾಸ್ವಾನ್ ಅವರು ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ನಾಪತ್ತೆಯಾದ ಬಳಿಕ ಸಾಕಷ್ಟು ಹುಡುಕಾಟ ನಡೆಸಲಾಯಿತು. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ನಂತರ ಪಾಸ್ವಾನ್ ಅವರ ಪುತ್ರ ಸಂಜಯ್ ಛೋಟು ಗುಪ್ತಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದ ಎಂದು ಹೇಳಿದ್ದಾರೆ. 
ನಳಂದಾ ಬಳಿ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದರು. ಕೂಡಲೇ ನಾಗರೀಕ ಆಸ್ಪತ್ರೆಗೆ ತೆರಳಿ, ದೇಹದ ಆಕಾರ ಹಾಗೂ ಬಟ್ಟೆಗಳನ್ನು ನೋಡಿ ಗುರುತು ಹಿಡಿಯಲಾಯಿತು ಎಂದು ಸಂಬಂಧಿಕರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್