ಚಬಹಾರ್ ಹೂಡಿಕೆ ಭರವಸೆ ಈಡೇರಿಸದಿದ್ದರೆ ವಿಶೇಷ ಸವಲತ್ತುಗಳಿಗೆ ಕತ್ತರಿ: ಭಾರತಕ್ಕೆ ಇರಾನ್ ಎಚ್ಚರಿಕೆ 
ದೇಶ

ಚಬಹಾರ್ ಹೂಡಿಕೆ ಭರವಸೆ ಈಡೇರಿಸದಿದ್ದರೆ ವಿಶೇಷ ಸವಲತ್ತುಗಳಿಗೆ ಕತ್ತರಿ: ಭಾರತಕ್ಕೆ ಇರಾನ್ ಎಚ್ಚರಿಕೆ

ಚಬಹಾರ್ ಬಂದಿನ ವಿಸ್ತರಣೆಯ ಯೋಜನೆಯಲ್ಲಿ ನೀಡಲಾಗಿದ್ದ ಹೂಡಿಕೆ ಭರವಸೆಗಳನ್ನು ಈಡೇರಿಸದ ಭಾರತದ ವಿರುದ್ಧ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: ಚಬಹಾರ್ ಬಂದಿನ ವಿಸ್ತರಣೆಯ ಯೋಜನೆಯಲ್ಲಿ ನೀಡಲಾಗಿದ್ದ ಹೂಡಿಕೆ ಭರವಸೆಗಳನ್ನು ಈಡೇರಿಸದ ಭಾರತದ ವಿರುದ್ಧ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಇರಾನ್ ನ ಉಪ ರಾಯಭಾರಿ ಮಸೂದ್ ರೆಜ್ವಾನಿಯನ್ ರಹಾಘಿ ಪ್ರಮುಖ ಭಾರತ-ಇರಾನ್ ನಡುವಿನ ಕಾರ್ಯತಂತ್ರದ ಭಾಗವಾಗಿರುವ ಚಬಹಾರ್ ಬಂದರಿಗೆ ಹೂಡಿಕೆ ಮಾಡುವ ಸಂಬಂಧ ಭಾರತ ನೀಡಿದ್ದ ಭರವಸೆಗಳು ಈ ವರೆಗೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತವನ್ನು ಟೀಕಿಸಿದ್ದಾರೆ. 
ಇದೇ ವೇಳೆ ಇರಾನ್ ನಿಂದ ತೈಲ ಆಮದ ಪ್ರಮಾಣವೂ ಇಳಿಕೆಯಾಗಿರುವುದರ ಬಗ್ಗೆಯೂ ಮಾತನಾಡಿರುವ ಇರಾನ್ ನ ಉಪರಾಯಭಾರಿ, ಇರಾನ್ ನಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ ಭಾರತ ಇರಾನ್ ನಿಂದ ಪಡೆಯುತ್ತಿರುವ ವಿಶೇಷ ಸವಲತ್ತುಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ. 
ಚಬಹಾರ್ ಬಂದರಿನಲ್ಲಿ ಈವರೆಗೂ ಭಾರತ ನೀಡಿದ್ದ ಭರವಸೆಗಳ ಪ್ರಕಾರ ಹೂಡಿಕೆ ಮಾಡದೇ ಇರುವುದು ದುರದೃಷ್ಟಕರ, ಹೂಡಿಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ  ಈಗಲಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಇರಾನ್ ನ ಅಧಿಕಾರಿ ಹೇಳಿದ್ದಾರೆ. 
ವಾಣಿಜ್ಯ, ವ್ಯಾಪಾರ ಉದ್ದೇಶದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ತಲುಪುವುದಕ್ಕೆ ಪಾಕಿಸ್ತಾನ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ-ಇರಾನ್ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ತಲುಪುವುದಕ್ಕೆ ಭಾರತಕ್ಕೆ ಚಬಹಾರ್ ಬಂದರು  ಮುಖ್ಯವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT