ಸಂಗ್ರಹ ಚಿತ್ರ 
ದೇಶ

ಭಾರತೀಯ ಸೇನೆಗೆ ಆಯ್ಕೆಯಾಗಿಲ್ಲವೆಂಬ ನೋವಿನಿಂದ ಫೇಸ್‌ಬುಕ್‌ ಲೈವ್‌ ಮಾಡಿ ಯುವಕ ಆತ್ಮಹತ್ಯೆಗೆ ಶರಣು!

ಭಾರತೀಯ ಸೇನೆಗೆ ಸೇರಬೇಕೆಂಬ ಹೆಬ್ಬಯಕೆ, ಐದು ಬಾರಿ ಪ್ರಯತ್ನಿಸಿದರು ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ಫೇಸ್‌ಬುಕ್‌ ಲೈವ್‌ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ...

ಆಗ್ರ: ಭಾರತೀಯ ಸೇನೆಗೆ ಸೇರಬೇಕೆಂಬ ಹೆಬ್ಬಯಕೆ, ಐದು ಬಾರಿ ಪ್ರಯತ್ನಿಸಿದರು ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೊಬ್ಬ ಫೇಸ್‌ಬುಕ್‌ ಲೈವ್‌ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನ್ಯೂ ಆಗ್ರದ ಶಾಂತಿನಗರದ ನಿವಾಸಿ ಬಿಎಸ್ಸಿ ಪದವಿಧರನಾಗಿರುವ ಮುನ್ನಾ ಕುಮಾರ್ ನಿನ್ನೆ ಫೇಸ್‌ಬುಕ್‌ ಲೈವ್‌ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಜಿಗದ ಸಂಗತಿಯೆಂದರೆ ಮುನ್ನಾ ಕುಮಾರ್ ಆತ್ಮಹತ್ಯೆಯ ಲೈವ್ ಅನ್ನು 2,750ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು ಯಾರೂ ಸಹ ಪೊಲೀಸರಿಗಾಗಲಿ ಅಥವಾ ಆತನ ಪೋಷಕರಿಗಾಗಲಿ ಮಾಹಿತಿ ನೀಡಲಿಲ್ಲ. 
ಮುನ್ನಾ ಕುಮಾರ್ ನೇಣಿಗೆ ಶರಣಾಗಿದ್ದು ಆರು ಪುಟಗಳ ಡೆತ್ ನೋಟ್ ಅನ್ನು ಬರೆದಿಟ್ಟಿದ್ದಾನೆ. ಪತ್ರದಲ್ಲಿ ನಾನು ಐದು ಬಾರಿ ಭಾರತೀಯ ಸೇನೆಯ ಪರೀಕ್ಷೆ ತೆಗೆದುಕೊಂಡಿದ್ದರು ಆಯ್ಕೆಯಾಗಲಿಲ್ಲವೆಂಬ ನೋವು ನನ್ನಲಿದೆ ಎಂದು ಬರೆದಿಟ್ಟಿದ್ದಾನೆ. 
ಆತ್ಮಹತ್ಯೆಗೆ ಶರಣಾಗಿರುವ ನನ್ನ ಅಣ್ಣನು ಭಗತ್ ಸಿಂಗ್ ಅವರ ಕಟ್ಟಾ ಅಭಿಮಾನಿ. ಅವರ ಸ್ಫೂರ್ತಿಯಿಂದ ಭಾರತೀಯ ಸೇನೆಗೆ ಸೇರಬೇಕೆಂಬ ಹೆಬ್ಬಯಕೆ ಹೊಂದಿದ್ದ. ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ನಮ್ಮ ಜೊತೆ ಸಂತೋಷವಾಗಿಯೇ ಊಟ ಮಾಡಿದ್ದ ಯಾರಿಗೂ ಆತ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾನೆ ಎಂಬ ಶಂಕೆ ಮೂಡಲಿಲ್ಲ ಎಂದು ಮುನ್ನಾ ಕುಮಾರ್ ಸಹೋದರ ಹೇಳಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT