ತಿರುವನಂತಪುರ; ನನ್ನ ಹೇಳಿಕೆ ಮೂಲಕ ಬಿಜೆಪಿ ಸಿದ್ಧಾಂತವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೆ ಅಷ್ಟೇ ಎಂದು ಹಿಂದೂ ಪಾಕಿಸ್ತಾನ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
2019ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ದೇಶ ಹಿಂದೂ ಪಾಕಿಸ್ತಾನವಾಗಲಿದೆ ಎಂಬ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತರೂರ್ ಅವರು ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕರು ತಮ್ಮದೇ ಸೈದ್ಧಾಂತಿಕ ನಂಬಿಕೆಗಳನ್ನು ಓದುವ ಅಗತ್ಯವಿದೆ. ಓದಿದ ಬಳಿಕ ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಬೇಕಿದೆ. ಹಿಂದೂ ಸಿದ್ಧಾಂತಗಳ ಕುರಿತ ಬರಹಗಳನ್ನು ನೋಡಿದ್ದೇವೆ. ಅದಕ್ಕೆ ಹೆಚ್ಚು ನಿಷ್ಠೆಯಿಂದ ಯಾರು ಇದ್ದಾರೆ? ತಮ್ಮ ಬರಹಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರುವವರ ಕುರಿತು ನಾನು ಮಾತನಾಡುತ್ತಿದ್ದೇನೆಂದು ಹೇಳಿದ್ದಾರೆ.
ಇದೇ ವೇಳೆ ದೀನ್ ದಯಾಳ್ ಉಪಾಧ್ಯಾಯ ಮತ್ತು ವಿನಯ್ ದಾಮೋದರ್ ಸಾವರ್ಕರ್ ಅವರ ಬರವಣಿಗೆಗಳನ್ನು ಪ್ರಸ್ತಾಪಿಸಿರುವ ಅವರು, ವ್ಯಕ್ತಿಗಿಂತಲೂ ಹೆಚ್ಚಾಗಿ ಅವರ ಸಿದ್ಧಾಂತಗಳನ್ನು ನಾನು ನಂಬುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಿರಂಗವಾಗಿ ಒಪ್ಪಿಕೊಂಡಿದ್ದೇ ಆದರೆ, ಈ ಕುರಿತ ಚರ್ಚೆಗಳು ಅಂತ್ಯವಾಗಲಿದೆ.
ದೀನದಯಾಳ್ ಉಪಾಧ್ಯಾಯ ಮತ್ತು ಸಾವರ್ಕರ್ ಅವರ ಬರಹಗಳನ್ನು ಭಾರತದ ಸಂವಿಧಾನ ತಿರಸ್ಕರಿಸಿತ್ತು. ಸಂವಿಧಾನವೇ ತಪ್ಪಾಗಿದೆ ಎಂದು ಅವರು ಹೇಳಿದ್ದರು. ಭಾರತದ ಸಂವಿಧಾನವು ಭಾರತ ಎಂದು ಕರೆಯಲ್ಪಡುವ ಒಂದು ಭೂಪ್ರದೇಶವಾಗಿದ್ದು, ಅದರಲ್ಲಿ ಎಲ್ಲಾ ಜನರೂ ಸ್ವೀಕಾರಾರ್ಹವಲ್ಲ, ಭಾರತ ರಾಷ್ಟ್ರದ ಕಲ್ಪನೆಯು ಒಂದು ಪ್ರದೇಶವಲ್ಲ, ಜನರಾಗಿರುತ್ತಾರೆ. ಆ ಜನರು ಹಿಂದೂ ಜನರಾಗಿರುತ್ತಾರೆ. ಹಿಂದೂ ಅಲ್ಲದ ಜನರು ಸಂವಿಧಾನದ ಫಲಾನುಭವಿಯಾಗಿರುತ್ತಾನೆ. ಇದು ಒಂದು ಹಿಂದು ರಾಷ್ಟ್ರದ ಸಂವಿಧಾನವಾಗಿದೆ ಎಂದು ಹೇಳಿದ್ದರು.
ಹಿಂದುತ್ವ ಚಳಿವಳಿ ಆರಂಭವಾದಾಗಿನಿದಂಲೂ ಸಂವಿಧಾನದ ನಿರಾಕರಣೆ ಕುರಿತು ಪ್ರಧಾನಮಂತ್ರಿಯಾಗಲೀ ಅಥವಾ ಬಿಜೆಪಿ ನಾಯಕರಾಗಲೀ ಸ್ಪಷ್ಟನೆ ನೀಡಿಲ್ಲ. ಹೇಳಿಕೆ ಕುರಿತಂತೆ ನಾನಾಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಕ್ಷಮೆ ಕೇಳುವುದಿಲ್ಲ.
ನಾನು ಕಾಂಗ್ರೆಸ್ ಪಕ್ಷದ ವಕ್ತಾರನೂ ಅಲ್ಲ. ತಿರುವನಂತಪುರಂ ಸಂಸದೀಯ ಸದಸ್ಯನಾಗಿ ನಾನು ನನ್ನ ವೈಯಕ್ತಿಕ ಹೇಳಿಕೆಯನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos