ದೇಶ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ: ಉಲ್ಲಾ ಹೊಡೆದ ಮತ್ತಿಬ್ಬರು ಸಾಕ್ಷಿಗಳು!

Srinivasamurthy VN
ಅಹ್ಮದಾಬಾದ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು ತಳುಕು ಹಾಕಿಕೊಂಡಿರುವ ಗುಜರಾತ್ ನ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣ ಮತ್ತೆ ಕಗ್ಗಂಟಾಗಿದ್ದು, ಪ್ರಕರಣ ಇಬ್ಬರು ಸಾಕ್ಷಿಗಳು ಇದೀಗ ಉಲ್ಟಾ ಹೊಡೆದಿದ್ದಾರೆ.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಸಾಕ್ಷಿಗಳಾದ ವಕೀಲ ಕೃಷ್ಣ ತ್ರಿಪಾಠಿ ಮತ್ತು ಮಹಿಪಾಲ್ ಸಿಂಗ್ ತಮ್ಮ ಈ ಹಿಂದಿನ ಹೇಳಿಕೆಗಳಿಗೆ ಭಿನ್ನ ಎಂಬಂತಹ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣ ಸಂಬಂಧ ಈ ವರೆಗೂ 100ಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು,  ಈ ಪೈಕಿ 85 ಸಾಕ್ಷಿಗಳು ಭಿನ್ನ ಹೇಳಿಕೆ ನೀಡಿ ಪ್ರಕರಣ ಮತ್ತೆ ಕಗ್ಗಂಟಾಗುವಂತೆ ಮಾಡಿದ್ದಾರೆ.
ಇಂದು ವಿಚಾರಣೆಗೆ ಹಾಜರಾಗಿದ್ದ ಪ್ರಜಾಪತಿ ಪರ ವಕೀಲ ಕೃಷ್ಣ ತ್ರಿಪಾಠಿ ಮತ್ತು ಮಹಿಪಾಲ್ ಸಿಂಗ್ ಇಂದು ಕೋರ್ಟ್ ನಲ್ಲಿ ತಮ್ಮ ಹೇಳಿಕೆ ದಾಖಲಿಸಿದರು. ಸಿಬಿಐ ವಿಶೇಷ ನ್ಯಾಯಮೂರ್ತಿ ಎಸ್ ಜೆ ಶರ್ಮಾ ಅವರ ಮುಂದೆ ಹಾಜರು ಪಡಿಸಿದಾಗ ಉಜ್ಜೈನ್ ನಲ್ಲಿ ಪ್ರಜಾಪತಿ ವಿರುದ್ಧ ದಾಖಲಾಗಿದ್ದ ಕಳ್ಳತನ ಪ್ರಕರಣ ಸಂಬಂಧ ತಾವು ಪ್ರಜಾಪತಿ ಅವರ ಪರ ವಕೀಲೆಯಾಗಿದ್ದೆ ಎಂದು ಕೃಷ್ಣ ತ್ರಿಪಾಠಿ ಹೇಳಿದ್ದಾರೆ. ಈ ಹಿಂದೆ ನಾನು ಪ್ರಜಾಪತಿ ಅವರನ್ನು ಕೋರ್ಟ್ ಆವರಣದಲ್ಲಿ ಭೇಟಿ ಮಾಡಿದ್ದೆ. ಆಗ ವಿಚಾರಣೆಗೆ ಗೈರಾದ ಕುರಿತು ವಿಚಾರಿಸಿದಾಗ ಅವರು ಪೊಲೀಸರು ನನ್ನನ್ನು ನಕಲಿ ಎನ್ ಕೌಂಟರ್ ನಲ್ಲಿ ಕೊಲ್ಲುವ ಸಂಚು ರೂಪಿಸಿದ್ದರು. ಹೀಗಾಗಿ ಅವರಿಂದ ನಾನು ತಪ್ಪಿಸಿಕೊಂಡಿದ್ದೆ ಎಂದು ಹೇಳಿದ್ದರು ಎಂದು ತ್ರಿಪಾಠಿ ತಮ್ಮ ಹೇಳಿಕೆಯಲ್ಲಿ ನಮೂದಿಸಿದ್ದಾರೆ.
ಪ್ರಕರಣದ ಮತ್ತೋರ್ವ ಸಾಕ್ಷಿ ಮಹಿಪಾಲ್ ಸಿಂಗ್ ಕೂಡ ತನ್ನ ಈ ಹಿಂದಿನ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ ಎಂದು ಸಿಬಿಐ ಪರ ವಕೀಲರು ಹೇಳಿದ್ದಾರೆ.
SCROLL FOR NEXT