ಮುಜಾಫರ್ ನಗರ: ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ರಾಷ್ಟ್ರ ಮಟ್ಟದ ಬಾಕ್ಸರ್ ದೇಹ ಮುಜಾಫರ್ ನಗರ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ.
21 ವರ್ಷದ ಅಭಿಶೇಕ್ ಶರ್ಮ ಮೃತ ದುರ್ದೈವಿ, ಖಾಟೋಲಿ ನಗರದ ಇವರು ಸ್ನಾನ ಮಾಡಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು, ಬುಧವಾರ ಸಂಜೆ ಶವ ಪತ್ತೆಯಾಗಿದೆ.
ಜುಲೈ 20 ರಂದು ನಡೆಯುವ ಟೂರ್ನಮೆಂಟ್ ನಲ್ಲಿ ಅಭಿಷೇಕ್ ಭಾಗವಹಿಸಬೇಕಿತ್ತು ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.