ದೇಶ

ಪ್ರತಿಭಟನೆ ಹಿನ್ನೆಲೆ: ಅಯೋಧ್ಯೆಯಲ್ಲಿ ಆರ್ ಎಸ್ ಎಸ್ ಆಯೊಜಿತ ನಮಾಜ್ ಕಾರ್ಯಕ್ರಮ ರದ್ದು

Raghavendra Adiga
ಅಯೋಧ್ಯೆ(ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಸಾಮೂಹಿಕ ನಮಾಜ್ ಹಾಗು ಕುರಾನ್ ಪಠಣ ಕಾರ್ಯಕ್ರಮ ರದ್ದಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ (ಆರ್ ಎಸ್ ಎಸ್) ಅಂಗ ಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಂಚ್ ಈ ಬೃಹತ್ ಸಾಮೂಹಿಕ ಪ್ರಾರ್ಥನೆ ಆಯೋಜಿಸಿತ್ತು.
ವಿಶ್ವ ಹಿಂದೂ ಪರಿಷತ್ ನ ಪ್ರವೀಣ್ ತೊಗಾಡಿಯಾ, ಇತರೆ ಮುಖಂಡರಾದ  ಮಹಂತ್‌ ರಾಜು ದಾಸ್‌,ಸಂತೋಷ್‌ ದುಬೆ ಇದೇ ಮುಂತಾದವರು ನಮಾಜ್ ಹಾಗು ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಗುರುವಾರದ ಕಾರ್ಯಕ್ರಮ ರದ್ದಾಗಿದೆ.
ಇಂತಹಾ ಆಚರಣೆ ಸರಯೂ ನದಿಯ ಪಾವಿತ್ರ್ಯತೆಯನ್ನೇ ಹಾಳುಮಾಡುತ್ತದೆ ಎಂದು ಅವರು ವಾದಿಸಿದ್ದರು.
SCROLL FOR NEXT