ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಚಂಡಿಘರ್: ಅತ್ಯಾಚಾರಕ್ಕೆ ಮಹಿಳೆಯರೇ ಕಾರಣವೆಂದು ಅವರತ್ತ ಬೆರಳು ತೋರಿಸುವವರ ಬೆರಳನ್ನು ಕತ್ತರಿಸಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ
ಹರಿಯಾಣದಲ್ಲಿ ಯಾರೇ ಆದರೂ ಅತ್ಯಾಚಾರ ಪ್ರಕರಣ ಅಥವಾ ಲೈಂಗಿಕ ಕಿರುಕುಳದಲ್ಲಿ ತೊಡಗಿಸಿಕೊಂಡಿದ್ದು ಆರೊಪಿ ಎಂದು ಕಂಡುಬಂದಲ್ಲಿ ಅಂತಹವರಿಗೆ ರಾಜ್ಯ ಸರ್ಕಾರಿ ಯೋಜನೆಗಳ ಸೌಲಭ್ಯ ದೊರಕಲಾರದೆಂದು ಅವರು ಹೇಳಿದ್ದಾರೆ.
"ನಮ್ಮ ಮಹಿಳೆಯರತ್ತ ಯಾರಾದರೂ ಬೆರಳು ತೋರಿದರೆ ಅವರ ಬೆರಳನ್ನು ಕತ್ತರಿಸುತ್ತೇವೆ.ಹಾಗೆಯೇ ನಾನು ಈ ಬಗೆಗೆ ವ್ಯವಸ್ಥೆ ಮಾಡುತ್ತೇನೆ" ಪಂಚಕುಲದಲ್ಲಿ ಏಕ್ ಔರ್ ಸುಧಾರ್ ಯೋಜನೆ ಉದ್ಘಾಟಿಸಿದ ಖಟ್ಟರ್ ಹೇಳಿದ್ದಾರೆ.
ಆದರೆ ಖಟ್ಟರ್ ಅವರ ಹೇಳಿಕೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಅವರು ಹೇಳಿಕೆ ಬಗೆಗೆ ಸ್ಪಷ್ಟನೆ ನಿಡಿದ್ದು ನಾವೇನೂ ಕ್ಷೌರಿಕನ ಆಡಳಿತ ನಡೆಸುವುದುದಾಗಿ ಹೇಳಿಲ್ಲ ಎಂದಿದ್ದಾರೆ.
"ನನ್ನ ಹೇಳಿಕೆಯ ಉದ್ದೇಶ ಕೇವಲ ಅಪರಾಧಿಗಳು/ಆರೋಪಿಗಳ ಶಿಕ್ಷೆಗಾಗಿ ಮಾತ್ರವೇ ಹೊರತು ಯಾವುದೇ ಅಸಂಸ್ಕೃತ ನಿಯಮ ಹೇರುವುದಿಲ್ಲ ಎಂದಿದ್ದಾರೆ.
ಆರೊಪಿಯು ತನ್ನೆಲ್ಲಾ ಆರೋಪದಿಂದ ಖುಲಾಸೆಯಾದರೆ ಅಂತಹವರು ಅನುಕೂಲಗಳನ್ನು ಪಎಯಲು ಅರ್ಹರಾಗುತ್ತಾರೆ ಎಂದು ಗುರುವಾರ ಖಟ್ಟರ್ ಹೇಳಿದ್ದರು.
ಅತ್ಯಾಚಾರ ಸಂಸ್ತ್ರಸ್ತೆಯು ಸರ್ಕಾರದಿಂದ ಒದಗಿಸಲಾದ ವಕೀಲರ ಹೊರತಾಗಿ ಬೇರೆ ವಕೀಲರನ್ನು ನೇಮಿಸಿಕೊಳ್ಳ ಬಯಸಿದರೆ ಅಂತಹಾ ಮಹಿಳೆಗೆ ಸರ್ಕಾರ 22,000 ರೂ. ಆರ್ಥಿಕ ನೆರವು ನಿಡಲಿದೆ ಮುಂದಿನ ಸ್ವಾತಂತ್ರ ದಿನಾಚರಣೆ ಅಥವಾ ರಕ್ಷಾ ಬಂಧನ ದಿನದಂದು ಮಹಿಳಾ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ಸಮಗ್ರ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos