ಆಗ್ರಾ: ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ, ಹಿಂದೂ ಪಾಕಿಸ್ತಾನವಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮುಖಕ್ಕೆ ಮಸಿ ಬಳಿಯುವವರಿಗೆ 11 ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಅಲಿಘಡ ಮುಸ್ಲಿಂ ಯುವ ನಾಯಕರೊಬ್ಬರು ಘೋಷಿಸಿದ್ದಾರೆ.
ಹಿಂದೂ ಪಾಕಿಸ್ತಾನ ಹೇಳಿಕೆಯನ್ನು ವಿರೋಧಿಸಿದ ಅಲಿಘಡ ಮುಸ್ಲಿಂ ಯುವ ಮಂಡಳಿ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ಅವರು, ತರೂರ್ ಮುಖಕ್ಕೆ ಮಸಿ ಬಳಿಯುವವರಿಗೆ ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಶಶಿ ತರೂರ್ ಅವರ ಈ ಬೇಜವಾಬ್ದಾರಿ ಹೇಳಿಕೆಯಿಂದ ಹಿಂದೂಗಳಿಗೆ ಮಾತ್ರವಲ್ಲ, ದೇಶಭಕ್ತ ಮುಸ್ಲಿಮರಿಗೂ ನೋವಾಗಿದೆ. ಶ್ರೇಷ್ಠ ದೇಶದಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಹಂದೂ-ಮುಸ್ಲಿಮರನ್ನು ಒಡೆಯಲು ಯತ್ನಿಸಲಾಗುತ್ತಿದೆ ಎಂದು ರಶೀದ್ ಆರೋಪಿಸಿದ್ದಾರೆ.
ನಿನ್ನೆ ತಿರುವನಂತಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಶಿ ತರೂರ್ ಮುಂದಿನ ಲೋಕಸಭೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ಭಾರತ 'ಹಿಂದೂ ಪಾಕಿಸ್ತಾನ'ವಾಗಲಿದೆ ಎಂದಿದ್ದರು. ಬಿಜೆಪಿ ಈಗಿನ ಸಂವಿಧಾನವನ್ನು ಹಾಳುಮಾಡಿ ಹೊಸ ಸಂವಿಧಾನ ಬರೆಯುತ್ತದೆ. ಅದರಲ್ಲಿ ಅಲ್ಪ ಸಂಖ್ಯಾತರಿಗೆ ಬೆಲೆ ಇರುವುದಿಲ್ಲ ಎಂದು ತರೂರ್ ಆರೋಪಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos