ಸಂಗ್ರಹ ಚಿತ್ರ 
ದೇಶ

ನೀರವ್ ಮೋದಿ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ಐಟಿ ಇಲಾಖೆ ನಿರ್ಧಾರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ  ನಿರ್ಧರಿಸಲಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ನೀರವ್ ಮೋದಿ ಗ್ರಾಹಕರಿಗೆ ಆದಾಯತೆರಿಗೆ ಇಲಾಖೆಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲ ನಿರ್ಧರಿಸಿದ್ದು, ದುಬಾರಿ ಆಭರಣಗಳನ್ನು ಖರೀದಿ ಮಾಡಿದ ಹಣದ ಮೂಲದ ಕುರಿತು ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಈಗಾಗಲೇ ದಾಖಲೆಗಳನ್ನು ಸಂಗ್ರಹಿಸಿದ್ದು, ನೀರವ್ ಮೋದಿ ಆಭರಣ ಸಂಸ್ಥೆಯಿಂದ ದುಬಾರಿ ಆಭರಣಗಳನ್ನು (high-end jewellery)ಗಳನ್ನು ಖರೀದಿ ಮಾಡಿದ ಗ್ರಾಹಕರನ್ನು ಗುರಿಯಾಗಿಸಿಕೊಂಡು ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ.
ಈ ಪ್ರಕ್ರಿಯೆಗಾಗಿ ನೀರವ್ ಮೋದಿ ಮತ್ತು ಅದರ ಸಹಯೋಗ ಆಭರಣ ಮಾರಾಟ ಸಂಸ್ಥೆಗಳಿಂದ ವಹಿವಾಟು ಪುಸ್ತಿಕೆಗಳನ್ನು ಆದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಪುಸ್ತಿಕೆಯಲ್ಲಿರುವ ದುಬಾರಿ ಗ್ರಾಹಕರನ್ನು ಪಟ್ಟಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಾದ ದಿನದಿಂದಲೇ ಅಂದರೆ 2014-2015ರಿಂದಲೇ ಆತನ ಸಂಸ್ಥೆಯ ದುಬಾರಿ ಗ್ರಾಹಕರನ್ನು ಅಧಿಕಾರಿಗಳು ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆಷ್ಟೇ ಐಟಿ ಅಧಿಕಾರಿಗಳು ಉದ್ಯಮಿ ನೀರವ್ ಮೋದಿ ಮತ್ತು ಆತನ ಸಂಬಂದಿಗಳು ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!