ಸಂಜು 
ದೇಶ

ಭಾರತೀಯ ಸಿನಿಮಾಗಳ ನೈತಿಕತೆ ಹಾಳಾಗಿದೆ ಎಂಬುದಕ್ಕೆ ಸಂಜು ಸಿನಿಮಾ ಉದಾಹರಣೆ: ಆರ್ ಎಸ್ಎಸ್

ಸಂಜಯ್ ದತ್ ಜೀವನ ಚರಿತ್ರೆಯ ಸಿನಿಮಾ ಬಗ್ಗೆ ಆರ್ ಎಸ್ ಎಸ್ ಟೀಕೆ ಮಾಡಿದ್ದು, ಭಾರತೀಯ ಸಿನಿಮಾಗಳ ನೈತಿಕ ಮಟ್ಟ ಹಾಳಾಗಿದೆ ಎಂಬುದಕ್ಕೆ ಸಂಜು ಸಿನಿಮಾ ಉದಾಹರಣೆ ಎಂದು ಹೇಳಿದೆ.

ಮುಂಬೈ: ಸಂಜಯ್ ದತ್ ಜೀವನ ಚರಿತ್ರೆಯ ಸಿನಿಮಾ ಬಗ್ಗೆ ಆರ್ ಎಸ್ ಎಸ್ ಟೀಕೆ ಮಾಡಿದ್ದು, ಭಾರತೀಯ ಸಿನಿಮಾಗಳ ನೈತಿಕ ಮಟ್ಟ ಹಾಳಾಗಿದೆ ಎಂಬುದಕ್ಕೆ ಸಂಜು ಸಿನಿಮಾ ಉದಾಹರಣೆ ಎಂದು ಹೇಳಿದೆ. 
ಆರ್ ಎಸ್ಎಸ್ ನ ಮುಖವಾಣಿ ಪಾಂಚಜನ್ಯದಲ್ಲಿ ಸಂಜು ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಿಂದಿ ಸಿನಿಮಾಗಳೇಕೆ ಕಳಂಕಿತ ವ್ಯಕ್ತಿತ್ವಗಳತ್ತ ಆಕರ್ಷಿತವಾಗುತ್ತವೆ ಎಂದು ಪ್ರಶ್ನಿಸಿದೆ. ಸುನಿಲ್ ದತ್ ಹಾಗೂ ನರ್ಗಿಸ್ ದತ್ ಪುತ್ರನಾಗಿರುವ ಸಂಜಯ್ ದತ್ ಗೆ  ಮಾದರಿ, ಆದರ್ಶ ವ್ಯಕ್ತಿಯನ್ನಾಗಿ ಬಿಂಬಿಸುವ, ತೆರೆ ಮೇಲೆ ವೈಭವದಿಂದ ತೋರಿಸುವ ಗುಣಗಳೇನಿವೆ ಎಂದು ಆರ್ ಎಸ್ಎಸ್ ಮುಖವಾಣಿ ಪ್ರಶ್ನಿಸಿದೆ. 
ಸಂಜು ಸಿನಿಮಾದ ಮೂಲಕ ಸಿನಿಮಾ ನಿರ್ದೇಶಕರು ಹಣ ಗಳಿಸುತ್ತಿದ್ದರೆ ಅದು ಭಾರತೀಯ ಸಿನಿಮಾಗಳ ನೈತಿಕತೆ ಹಾಳಾಗಿದೆ ಎಂಬುದಕ್ಕೆ ಉದಾಹರಣೆ ಎಂದು ಆರ್ ಎಸ್ ಎಸ್ ಹೇಳಿದೆ. ಇದೇ ವೇಳೇ ರಾಜ್ ಕುಮಾರ್ ಹಿರಾನಿ ಅವರ ಪಿಕೆ ಸಿನಿಮಾ ಬಗ್ಗೆಯೂ ಆರ್ ಎಸ್ಎಸ್ ಆಕ್ಷೇಪ ವ್ಯಕ್ತಪಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!