ದೇಶ

ದಲಿತ ಮುಖಂಡ ಜಿತನ್ ರಾಮ್ ಮಾಂಝಿ ತಮ್ಮ ಪಕ್ಷಕ್ಕೆ 5 ಲೋಕಸಭಾ ಸೀಟ್ ಬೇಡಿಕೆ: ಆರ್ಜೆಡಿ, ಕಾಂಗ್ರೆಸ್ ಅಪಸ್ವರ

Vishwanath S
ಪಾಟ್ನಾ: ಎನ್ಡಿಎ ಮೈತ್ರಿಕೂಟವನ್ನು ತೊರೆದು ತಮ್ಮ ಸ್ವಂತ ಪಕ್ಷ ಸ್ಥಾಪಿಸಿದ್ದ ಬಿಹಾರ ದಲಿತ ಮುಖಂಡ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ರಾಷ್ಟ್ರೀಯ ಜನತಾದಳ(ಆರ್ಜೆಡಿ) ಗ್ರಾಂಡ್ ಅಲೈಯೆನ್ಸ್ ಸೇರಿದ್ದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಐದು ಸ್ಥಾನಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರ್ಜೆಡಿ ಹೇಳಿದೆ. 
2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮಂದಾಗಿದ್ದು ವಿರೋಧ ಪಕ್ಷದ ಮೈತ್ರಿ ಪಕ್ಷವಾದ ಆರ್ಜೆಡಿಗೆ ಎದುರಾಗಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಗುರುತಿಸಿದೆ. ಇನ್ನು ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡಲಾಗಿದೆ ಎಂದು ಎಚ್ಎಎಂ ಮೂಲಗಳು ಹೇಳಿದೆ. 
ಜಿತನ್ ರಾಮ್ ಮಾಂಝಿ ಸ್ಥಾಪಿತ ಹಿಂದುಸ್ತಾನಿ ಅವಾಮ್ ಮೋರ್ಚ(ಎಚ್ಎಎಂ) ಪಕ್ಷ ಸದ್ಯಕ್ಕೆ ಜಮುಯಿ, ಗೋಪಾಲ್ ಗಂಜ್, ಗಯಾ, ಮುಂಗೇರ್, ಖಾಗರಿಯಾ, ನಳಂದ ಮತ್ತು ಮುಜಾಫರ್ ಪುರ್ ಕ್ಷೇತ್ರಗಳನ್ನು ಗುರುತಿಸಿದೆ. 
ಇನ್ನು ಆರ್ಜೆಡಿ ಮತ್ತು ಕಾಂಗ್ರೆಸ್ ಎಚ್ಎಎಂ ಪಕ್ಷಕ್ಕೆ ಐದು ಲೋಕಸಭಾ ಸೀಟುಗಳನ್ನು ಬಿಟ್ಟುಕೊಡಲು ಅಸಮಾಧಾನ ವ್ಯಕ್ತಪಡಿಸಿದೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಎಚ್ಎಎಂ ಕಳಪೆ ಪ್ರದರ್ಶನ ನೀಡಿತ್ತು.
ಆರ್ಜೆಡಿ, ಕಾಂಗ್ರೆಸ್ ಮತ್ತು ಎಚ್ಎಎಂ ಮೂರು ಗ್ರಾಂಡ್ ಅಲೈಯೆನ್ಸ್ ನಡುವೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಮಾಂಝಿ ಬಯಸಿದ್ದಾರೆ. ಇನ್ನು ಮೈತ್ರಿಯಲ್ಲಿ ಪ್ರಮುಖ ನಿರ್ಧಾರಗಳನ್ನು ಆರ್ಜೆಡಿ ತೆಗೆದುಕೊಳ್ಳುತ್ತದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಆರ್ಜೆಡಿ ಇಲ್ಲ. ಏಕೆಂದರೆ ಎನ್ಡಿಎ ಮೈತ್ರಿ ಪಕ್ಷಗಳಾದ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಮತ್ತು ಉಪೇಂದ್ರ ಕುಶ್ವಾಹಾ ಅವರ ಆರ್ಎಲ್ಎಸ್ಪಿ ಪಕ್ಷವನ್ನು ಲೋಕಸಭಾ ಚುನಾವಣೆಗೂ ಮುನ್ನ ತಮ್ಮ ಕಡೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT