ದೇಶ

ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ, ಇಬ್ಬರು ಬಿಎಸ್ ಯೋಧರು ಹುತಾತ್ಮ

Srinivasamurthy VN
ರಾಯ್ ಪುರ: ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಎನ್ ಕೌಂಟರ್ ನಲ್ಲಿ ಇಬ್ಬರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಛತ್ತೀಸ್ ಘಡದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಬಿಎಸ್ ಎಫ್ ಸಿಬ್ಬಂದಿ ಎನ್ ಕೌಂಟರ್ ನಡೆಸುತ್ತಿದ್ದು, ಬಿಎಸ್ ಎಫ್ ನ ಮಹ್ಲಾ ಕ್ಯಾಂಪ್ ಇರುವ ಅರಣ್ಯ ಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಎನ್ ಕೌಂಟರ್ ನಲ್ಲಿ ಇಬ್ಬುರ ಸೇನಾ ಸಿಬ್ಬಂದಿಗಳು ಹತರಾಗಿದ್ದು, ಮತ್ತೋರ್ವ ಸಿಬ್ಬಂದಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಎನ್ ಕೌಂಟರ್ ನಡೆಯುತ್ತಿರುವ ಪ್ರದೇಶ ಪಾರ್ತಪುರ್ ಪೊಲೀಸ್ ಸರಹದ್ದಿನದ್ದಾಗಿದ್ದು. ಇದೀಗ ಘಟನಾ ಪ್ರದೇಶಕ್ಕೆ ಸ್ಥಳೀಯ ಪೊಲೀಸರು ಕೂಡ ದೌಡಾಯಿಸಿದ್ದಾರೆ. ಬಿಎಸ್ ಎಫ್ ನ 114ನೇ ಬೆಟಾಲಿಯನ್ ತಂಡ ನಕ್ಸಲರ ವಿರುದ್ಧ ಶೋಧ ಕಾರ್ಯಾರಣೆ ಮುಗಿಸಿ ಕ್ಯಾಂಪ್ ಗೆ ವಾಪಸ್ ಆಗುತ್ತಿದ್ದ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಮೂಲಗಳ ಪ್ರಕಾರ ನಕ್ಸಲರು ಬಿಎಸ್ ಎಫ್ ಕ್ಯಾಂಪ್ ಮೇಲೆಯೇ ನೇರವಾಗಿ ಭಾರಿ ವಿಧ್ವಂಸಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಪ್ರಸ್ತುತ ಘಟನಾ ಪ್ರದೇಶದ ಸುತ್ತ ಮುತ್ತ ಹೈ ಅಲರ್ಟ್ ಘೋಷಣೆಯಾಗಿದ್ದು, ಎನ್ ಕೌಂಟರ್ ಪ್ರಗತಿಯಲ್ಲಿದೆ.
 ಹುತಾತ್ಮ ಯೋಧರಿಗೆ ಛತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ತೀವ್ರ ಸಂತಾಪ ಸೂಚಿಸಿದ್ದಾರೆ.
SCROLL FOR NEXT