ದೇಶ

ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿ ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ

Nagaraja AB

ನವದೆಹಲಿ:ಪಾಕಿಸ್ತಾನದ ಬೆಂಬಲದೊಂದಿಗೆ  ದೇಶದ ವಿರುದ್ದವೇ  ಪಿತ್ತೂರಿ ನಡೆಸುತ್ತಿದ್ದ  ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ಕಾಶ್ಮೀರದ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಯನ್ನು  ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಂದ್ರಾಬಿ  ನಿಷೇಧಿತ ದುಕ್ ತರೇನ್ -ಇ- ಮಿಲತ್ ಸಂಘಟನೆಯ ಮುಖ್ಯಸ್ಥೆಯಾಗಿದ್ದು,  10 ದಿನಗಳ ಎನ್ ಐಎ ವಶದ ನಂತರ ಇಬ್ಬರು ಮಹಿಳಾ ಸಹಚರರೊಂದಿಗೆ ಆಕೆಯನ್ನು  ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಎನ್ ಐಎ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಪೊನಾಮ್ ಎ ಬಾಂಬ ಅವರು ಮೂವರು ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ನೆರೆಯ ಪಾಕಿಸ್ತಾನದ ಬೆಂಬಲ ಪಡೆದು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ಪಿತೂರಿ ಕೆಲಸದಲ್ಲಿ ತೊಡಗಿದ್ದರು ಎಂದು ಎನ್ ಐಎ ಹೇಳಿಕೆ ನೀಡಿತ್ತು.

ಮೂವರು ಆರೋಪಿಗಳನ್ನು ತಿಹಾರ್ ನ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಅಂದ್ರಾಬಿ ಜೊತೆಗೆ ಆಕೆಯ ಸಹಚರರಾದ ಸೊಪಿ ಫೇಮೀದಾ, ಮತ್ತು ನಹಿದಾ ನಸ್ರೀನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ವರ್ಷ ಏಪ್ರಿಲ್ 1 ರಂದು ಈ ಮೂವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು.  ಕಳೆದ ತಿಂಗಳು ಜಮ್ಮು-ಕಾಶ್ಮೀರ ಹೈಕೋರ್ಟ್ ಜಾಮೀನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಅಂದ್ರಾಬಿಯನ್ನು ಶ್ರೀನಗರದ ಕಾರಾಗೃಹದಲ್ಲಿ ಇರಿಸಲಾಗಿತ್ತು.
SCROLL FOR NEXT