ಮೂಲಭೂತ ಹಕ್ಕಿನ ಉಲ್ಲಂಘನೆಯಾಗದಂತೆ ರಕ್ಷಣೆ ನೀಡುವುದು ನ್ಯಾಯಾಂಗದ ಕರ್ತವ್ಯ: ಸುಪ್ರೀಂ ಕೋರ್ಟ್
ನವದೆಹಲಿ: ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾದಲ್ಲಿ ನ್ಯಾಯಾಲಯಗಳು ಸರ್ಕಾರಗಳು ಜಾರಿಗೆ ತರುವ ಕಾನೂನು ತಿದ್ದುಪಡಿಯನ್ನೇ ಕಾದು ಕುಳಿತಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠವು ಸಲಿಂಗಿಗಳ ಲೈಂಗಿಕ ಹಕ್ಕಿನ ಕುರಿತು ಪರಾಮರ್ಶೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಅಭಿಪ್ರಾಯ ನೀಡಿದೆ."ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ಸರ್ಕಾರ ಜಾರಿಗೆ ತರುವ ಯಾವ ಕಾನೂನು ಅಥವಾ ಕಾನೂನು ತಿದ್ದುಪಡಿಗಳನ್ನು ಕಾದು ಕುಳಿತುಕೊಳ್ಳುವಂತಿಲ್ಲ" ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್ ಎಂ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡಮತ್ತು ಇಂಡು ಮಲ್ಹೋತ್ರಾ ಅವರನ್ನೂ ಒಳಗೊಂಡ ಪೀಠವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದದ್ದು ಕ್ಂಡರೆ ಅದನ್ನು ಸರಿಪಡಿಸಲು ನ್ಯಾಯಾಲಯವು ಯಾವುದೇ ಕಾಯುವಿಕೆಯ ಮಾರ್ಗ ಅನುಸರಿಸಬೇಕಾಗಿಲ್ಲ ಎಂದಿದೆ.
ಇಂಡಿಯನ್ ಪೀನಲ್ ಕೋಡ್ ನ377 ನೇ ವಿಭಾಗ ಸಂವಿಧಾನಾತ್ಮಕ ಮಾನ್ಯತೆಯನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಪೀಠವು ಅವಲೋಕನ ನಡೆಸುವಾಗ ವಕೀಲರಾದ ಶ್ಯಾಮ್ ಜಾರ್ಜ್ ಮದ್ಯ ಪ್ರವೇಶಿಸಿ ಕೆಲವು ಚರ್ಚ್ ಗಳ ಅಪೋಸ್ಟೋಲಿಕ್ ಅಲಯನ್ಸ್ ಮತ್ತು ಉತ್ಕಲ್ ಕ್ರಿಶ್ಚಿಯನ್ ಅಸೋಸಿಯೇಷನ್ ಗಳು 377 ನೇ ವಿಧಿಯ ತಿದ್ದುಪಡಿ ಅಥವಾ ಬದಲಾವಣೆಗಾಗಿ ಅನುಮತಿಸುವುದು ಶಾಸಕಾಂಗದ ಕೆಲಸವೆನ್ನುವುದಾಗಿ ವಾದಿಸಿದೆ ಎಂದರು.
ಆದರೆ ನ್ಯಾಯಪೀಠವು ಮೂಲಭೂತ ಹಕ್ಕನ್ನು ಉಲ್ಲಂಘನೆ ವಿಚಾರ ಬಂದಾಗ ಅದನ್ನು ಪರಿಹರಿಸುವ ಅಧಿಕಾರ ನ್ಯಾಯಾಲಯಗಳಿಗಿದೆ ಎಂದಿದೆ. ವಕೀಲರೇ "ಲೈಂಗಿಕ ದೃಷ್ಟಿಕೋನ" ಎಂಬ ಪದವನ್ನು ಉಲ್ಲೇಖಿಸಿದ್ದಾರೆ ಮತ್ತು ಇದನ್ನು "ಲಿಂಗ" ಎಂಬ ಪದದೊಂದಿಗೆ 14 ಮತ್ತು 15ನೇ ಪ್ಯಾರಾದಲ್ಲಿ ಬಳಸಿದ್ದಾರೆ. ಅದು ನಾಗರಿಕ ಸಮಾನತೆಯ ಹಕ್ಕನ್ನು ಒಳಗೊಂಡಿದೆ ಎಂದು ಕೋರ್ಟ್ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos