ಸಂಗ್ರಹ ಚಿತ್ರ 
ದೇಶ

ಗನ್ ಪಾಯಿಂಟ್‌ನಲ್ಲಿ ರೈಲ್ವೆ ಇಂಜಿನಿಯರ್‌ನನ್ನು ಅಪಹರಿಸಿ, ಮದುವೆಯಾಗುವಂತೆ ಒತ್ತಾಯ!

ಭಾರತೀಯ ರೈಲ್ವೆ ಇಂಜಿನಿಯರ್ ಒಬ್ಬವನ್ನು ಗನ್ ಪಾಯಿಂಟ್ ನಲ್ಲಿ ಬಲವಂತವಾಗಿ ಅಪಹರಿಸಿ ಯುವತಿ ಜೊತೆ ಮದುವೆ ಆಗುವಂತೆ ಒತ್ತಾಯಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ...

ಪಾಟ್ನಾ(ಬಿಹಾರ್): ಭಾರತೀಯ ರೈಲ್ವೆ ಇಂಜಿನಿಯರ್ ಒಬ್ಬವನ್ನು ಗನ್ ಪಾಯಿಂಟ್ ನಲ್ಲಿ ಬಲವಂತವಾಗಿ ಅಪಹರಿಸಿ ಯುವತಿ ಜೊತೆ ಮದುವೆ ಆಗುವಂತೆ ಒತ್ತಾಯಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. 
ವೈಶಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಭಾರತೀಯ ರೈಲ್ವೆಯಲ್ಲಿ ಸಿನಿಯರ್ ಸೆಕ್ಷನ್ ಇಂಜಿನಿಯರ್ ದುರ್ಗ ಶರಣ್ ಅವರು ಕೆಲಸ ಮುಗಿಸಿಕೊಂಡು ಸ್ನೇಹಿತನ ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ವಧು ತಂದೆ ಸೇರಿದಂತೆ ಐವರು ಸೇರಿ ಅಪಹರಣ ಮಾಡಿ ಮದುವೆ ಮಾಡಲು ಮುಂದಾಗಿದ್ದಾರೆ. 
ಈ ಮಧ್ಯೆ ದುರ್ಗ ಶರಣ್ ಸ್ನೇಹಿತ ಪೋಷಕರಿಗೆ ವಿಷಯ ಮುಟ್ಟಿಸಿದ್ದು ದುರ್ಗ ತಾಯಿ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ರಘುಪುರ್ ಗ್ರಾಮಕ್ಕೆ ತೆರಳಿ ದುರ್ಗ ಶರಣ್ ನನ್ನು ವಶಕ್ಕೆ ಪಡೆದಿದ್ದಾರೆ. 
ಇನ್ನು ಪೊಲೀಸರಿಗೆ ವಧು ಹಲವು ವರ್ಷಗಳಿಂದ ತಮ್ಮಿಬ್ಬರ ನಡುವೆ ಸಂಬಂಧವಿದ್ದು ಮದುವೆಯಾಗುವುದಾಗಿ ದುರ್ಗ ಶರಣ್ ಹೇಳಿದ್ದ ಎಂದು ಹೇಳಿದ್ದಾಳೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ