ದೇಶ

ಕಾಶ್ಮೀರಿ ಪೋಲೀಸ್ ಕಾರ್ಯಾಚರಣೆ: ಪಾಕ್ ಗುರುತು ಹೊಂದಿದ್ದ ಶಸ್ತ್ರಾಸ್ತ್ರಗಳು ಪತ್ತೆ, ಇಬ್ಬರ ಬಂಧನ

Raghavendra Adiga
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕಾಶ್ಮೀರಿ ಪೋಲೀಸರು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಪಾಕಿಸ್ತಾನದಲ್ಲಿ ತಯಾರಾದ ಕೆಲವು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪುಲ್ವಾರಾದ ದಂಗೈಪೋರಾ ಅರೈಹಲ್ ಗ್ರಾಮದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಬಿಲಾಲ್ ಅಹಮದ್ ಗನಿ ಎನ್ನುವವನಿಗೆ ಸೇರಿದ್ದ ಮನೆಯಲ್ಲಿ ಸ್ಪೋಟಕ ಸಾಮಗ್ರಿಗಳು ದೊರಕಿದೆ ಎಂದು ಪೋಲೀಸ್ ವಕ್ತಾರರು ಹೇಳಿದ್ದಾರೆ. ಇವುಗಳಲ್ಲಿ ಕೆಲವು ವಸ್ತುಗಳ ಮೇಲೆ ಪಾಕಿಸ್ತಾನ ಚಿನ್ಹೆ ಇರುವುದು ಪತ್ತೆಯಾಗಿದೆ.
ಇನ್ನೊಂದೆಡೆ ಅದೇ ಜಿಲ್ಲೆ ನೈನಾ ಬತಾಪೋರಾ ಎನ್ನುವ ಗ್ರಾಮದಲ್ಲಿ ನಡೆದಲಾದ ಶೋಧದ ವೇಳೆ ಚೀನಾ ಪಿಸ್ತೂಲು, ಏಳು ಸಜೀವ ಒಂಭತ್ತು ಎಂಈಂ ಬುಲೆಟ್ ಗಳು, ಒಂದು 7.62 ಎಂಎಂ ಗುಂಡು ಹಾಗೂ ಒಂದು ವೃತ್ತಪತ್ರಿಕೆ ದೊರಕಿದೆ. ಖೇಲನ್ ಮೂಲದ ಸಬ್ಜಾರ್ ಅಹಮದ್ ಮಿರ್ ಎನ್ನುವವನಿಗೆ ಸೇರಿದ್ದ ನಿವಾಸದಲ್ಲಿ ಈ ವಸ್ತುಗಳು ಪತ್ತೆಯಾದವೆಂದು ಪೋಲೀಸರು ಹೇಳಿದ್ದಾರೆ.
ಎರಡೂ ಕಡೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು ಹೆಚ್ಚುವರಿ ತನಿಖೆಗಾಗಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ವಿವರಿಸಿದ್ದಾರೆ.
SCROLL FOR NEXT