ಪ್ರಧಾನಿ ಮೋದಿ ಮತ್ತು ಸಾಕ್ಷಿ ಪ್ರದ್ಯುಮ್ನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ (ಜುಲೈ 18) ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಕೌನ್ಸಿಲ್-ಐಎಸ್ಸಿ ಟಾಪರ್ ಸಾಕ್ಷಿ ಪ್ರದ್ಯುಮ್ನ ಅವರಿಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
"ಈ ಅದ್ಭುತ ಪತ್ರಕ್ಕಾಗಿಸಾಕ್ಷಿಗೆ ಧನ್ಯವಾದಗಳು. ನಿಮ್ಮ ಪರೀಕ್ಷೆಯ ಸಿದ್ಧತೆಗಳಲ್ಲಿ ಎಕ್ಸಾಮ್ ವಾರಿಯರ್ಸ್ ನಿಮಗೆ ಸಹಾಯ ಮಾಡಿದೆ ಎಂದು ತಿಳಿದು ನನಗೆ ಸಂತಸವಾಗಿದೆ.ನಿಮಗೆ ನನ್ನ ಶುಭಕಾಮನೆಗಳು." ಎಂದು ಮೋದಿ ಸಾಕ್ಷಿ ಅವರಿಗೆ ಶುಭಾಶಯ ಕೋರಿದ್ದಾರೆ.
ಇದಕ್ಕೂ ಮುನ್ನ ಐಎಸ್ಸಿ ಅಗ್ರ ಶ್ರೇಯಾಂಕಿತರಾದ ಸಾಕ್ಷಿ ಜುಲೈ 6 ರಂದು ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಪತ್ರದಲ್ಲಿ ’ಎಕ್ಸಾಮ್ ವಾರಿಯರ್ಸ್’ ಪುಸ್ತಕ ತನಗೆ ಹೇಗೆ ಉಪಯುಕ್ತವಾಯಿತು ಎಂದು ವಿವರಿಸಿರುವುದರೊಡನೆ ಪುಸ್ತಕ ಬರೆದ ಪ್ರಧಾನಿಗೆ ಧನ್ಯವಾದ ತಿಳಿಸಿದ್ದರು.
"ನನ್ನ 12 ನೇ ತರಗತಿ ಪರೀಕ್ಷೆಗಳು ಆರಂಭವಾಗುವ ವೇಳೆ ನಾನು ’ಎಕ್ಸಾಮ್ ವಾರಿಯರ್ಸ್’ ಪುಸ್ತಕವನ್ನು ಉಡುಗೊರೆಯಾಗಿ ಪಡೆದಿದ್ದೇನೆ.ಈ ಪುಸ್ತಕವು ನನ್ನ ಗಮನವನ್ನು ಕೇಂದ್ರೀಕರಿಸಲು, ಒತ್ತಡವನ್ನು ನಿವಾರಿಸಲು ಮತ್ತು ವಿಶ್ವಾಸವನ್ನು ಹೆಚ್ಚಿಸಲು ಮಾತ್ರವಲ್ಲ, ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಹ ನನ್ನನ್ನು ಉದ್ವಿಗ್ನತೆಗಳಿಂದ ದೂರ ಮಾಡುತ್ತದೆ.ಈ ಪುಸ್ತಕವು ಅಮೂಲ್ಯವಾಗಿದೆ "ಎಂದು ಅವರು ಪತ್ರದಲ್ಲಿ ವಿವರಿಸಿದ್ದರು.
"ಟೈಮ್ ಮ್ಯಾನೇಜ್ ಮೆಂಟ್, ಪ್ರೆಸೆಂಟೇಷನ್, ದಕ್ಷತೆ, ಒಬ್ಬರ ಸಾಮರ್ಥ್ಯಗಳನ್ನು ಗೌರವಿಸುವುದು, ಪರಿಶ್ರಮದ ಶಕ್ತಿ ಹಾಗೂ ಆಶಾವಾದವನ್ನು ಹೆಚ್ಚಿಸುವ ನಿಮ್ಮ ಈ ಪುಸ್ತಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಪೂರ್ತಿಯನ್ನು ಒದಗಿಸಲಿದೆ." ಪ್ರದ್ಯುಮ್ನ ಪತ್ರದಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಒತ್ತಡವನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರಧಾನಿ ಮೋದಿ ಬರೆದ ಪುಸ್ತಕ ’ಎಕ್ಸಾಮ್ ವಾರಿಯರ್ಸ್’ ಈ ವರ್ಷದ ಆರಂಭದಲ್ಲಿ ಪ್ರಕಟವಾಗಿತ್ತು.
"ಭಾರತದ ಪ್ರಧಾನಿಯೊಬ್ಬರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿದು ನನಗೆ ಅತೀವ ಸಂತಸವಾಗಿದೆ.ನನ್ನಲ್ಲಿ ವಿಶ್ವಾಸ ಬೆಳೆಸಲು ನನಗೆ ಸಹಾಯ ಮಾಡಿದ್ದ ’ಎಕ್ಸಾಮ್ ವಾರಿಯರ್ಸ್’ ಗೆ ನಾನು ಕೃತಜ್ಞ. ನನ್ನ ತಂದೆ ಪುಸ್ತಕದ ಕುರಿತು ಪ್ರಧಾನಿಗೆ ಪತ್ರ ಬರೆಯುವಂತೆ ಪ್ರೇರೇಪಣೆ ನೀಡದರು" ಸಾಕ್ಷಿ ಪ್ರದ್ಯುಮ್ನ ಹೇಳಿದ್ದಾರೆ.
ಈ ವರ್ಷದ ಐಎಸ್ಸಿ ಪರೀಕ್ಷೆಯಲ್ಲಿ ಶೇ.99.5 ಅಂಕ ಗಳಿಸುವುದರೊಡನೆ ಪ್ರದ್ಯುಮ್ನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್.ವಿಷಯಗಳಲ್ಲಿ 100 ಅಂಕ ಪಡೆದರೆ ಹಿಂದಿ ಭಾಷೆಯಲ್ಲಿ 99 ಮತ್ತು ಇಂಗ್ಲಿಷ್ ನಲ್ಲಿ 98 ಅಂಕ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics