ನವದೆಹಲಿ: ಜಗತ್ತಿನ ಅಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರುವ ಕುರಿತಂತೆ ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಕೇಂದ್ರ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು ಭಾರತೀಯರು ಮತ್ತು ಸಂಸತ್ ವ್ಯಕ್ತಪಡಿಸಿದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಪುರಾತತ್ವ ಸಮೀಕ್ಷೆಯಿಂದ ಮಾಹಿತಿ ಪಡೆದು ಮತ್ತೆ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರಲು ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಹೇಳಿದರು.
ಅಮೂಲ್ಯವಾದ ಕೊಹಿನೂರ್ ವಜ್ರ ಹಾಗೂ ಇತರ ಪ್ರಾಚೀನ ವಸ್ತುಗಳನ್ನು ಮರಳಿ ತರಲು ವಿದೇಶಾಂಗ ಸಚಿವಾಲಯ ಪ್ರಯತ್ನಿಸುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಸಚಿವರು ಈ ಹೇಳಿಕೆ ನೀಡಿದ್ದಾರೆ.