ನವದೆಹಲಿ: ಭಾರತವನ್ನು ಗುರಿ ಮಾಡಿಕೊಂಡಿರುವ ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಇದೀಗ ಭಾರತೀಯ ಸೇನೆಯ ವಿನಾಶಕಾರಿ ಸಮರನೌಕೆಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳನ್ನು ಧ್ವಂಸ ಮಾಡಲು ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ ನೀಡುತ್ತಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಜೈಶ್ ಉಗ್ರ ಸಂಘಟನೆ ಪಾಕಿಸ್ತಾನದ ವ್ಯಾಪ್ತಿಗೆ ಬರುವ ಮತ್ತು ಪಾಕಿಸ್ತಾನ ನೌಕಾಪಡೆಯ ಸಮುದ್ರವ್ಯಾಪ್ತಿಯ ಬಹವಲ್ಪುರ ಸಮುದ್ರ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಅತ್ಯಂತ ಬಲಶಾಲಿ ಮತ್ತು ವಿನಾಶಕಾರಿ ಸಮರನೌಕೆಗಳನ್ನು ಧ್ವಂಸ ಮಾಡಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದು, ಸಮುದ್ರದ ಅತ್ಯಂತ ಆಳಕ್ಕೆ ಧುಮುಕಿ ಅಲ್ಲಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಕುರಿತು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಭಾರತದ ಪರಮಾಣ ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ಸಾಗಿಸುವ ನೌಕೆಗಳು ಮತ್ತು ಸಮರ ನೌಕೆಗಳು ಉಗ್ರ ಟಾರ್ಗೆಟ್ ಆಗಿದ್ದು, ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿದೆ. ಇದಲ್ಲದೆ ವಿಶಾಖಪಟ್ಟಣದಲ್ಲಿ ಲಂಗರು ಹಾಕಿರುವ ಐಎನ್ಎಸ್ ಚಕ್ರ ಮೇಲೂ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
2000 ಇಸವಿಯ ದುರಂತ ಇನ್ನೂ ಕಣ್ಣಮುಂದಿದೆ
ಇನ್ನು ಈ ಹಿಂದೆ ಇದೇ ರೀತಿ ಸಂಚು ರೂಪಿಸಿದ್ದ ಅಲ್ ಖೈದಾ ಉಗ್ರ ಸಂಘಟನೆ ಅಮೆರಿಕದ ಜಲಾಂತರ್ಗಾಮಿಯನ್ನು ಹೊಡೆದುರುಳಿಸಿತ್ತು. ಅಮೆರಿಕ ವಿನಾಶಕಾರಿ ಜಲಾಂತರ್ಗಾಮಿ ಯುಎಸ್ ಎಸ್ ಯೆಮೆನ ಅಡೆನ್ ಬಂದರಿನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಲ್ ಖೈದಾ ಉಗ್ರರು ಸಮುದ್ರಕ್ಕೆ ಧುಮಿಕಿ ಸ್ಫೋಟಕಗಳಿಂಗ ದಾಳಿ ಮಾಡಿ ಜಲಾಂತರ್ಗಾಮಿಯನ್ನು ಧ್ವಂಸ ಮಾಡಿದ್ದರು. ಈ ದುರಂತದಲ್ಲಿ 17 ಮಂದಿ ಅಮೆರಿಕದ ನೌಕಾಪಡೆಯ ಸೈನಿಕರು ಹುತಾತ್ಮರಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos