ದೇಶ

5 ಗಂಗಾ ಜಲಾನಯನ ರಾಜ್ಯಗಳಲ್ಲಿ ಅರಣ್ಯ ಸಂರಕ್ಷಣಾ ಅಭಿಯಾನ

Nagaraja AB

ನವದೆಹಲಿ: ಗಂಗಾ ಜಲಾನಯನ ರಾಜ್ಯಗಳಾದ ಉತ್ತರಖಂಡ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ , ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸ್ವಚ್ಛ ಗಂಗಾ ರಾಷ್ಟ್ರೀಯ ಆಯೋಗದಿಂದ  ಅರಣ್ಯ  ಸಂರಕ್ಷಣಾ ಅಭಿಯಾನವನ್ನು  ಕೈಗೊಳ್ಳಲಾಗಿತ್ತು ಎಂದು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಇಂದು ತಿಳಿಸಿದೆ.

ಜುಲೈ 9 ರಿಂದ ಒಂದು ವಾರಗಳ ಕಾಲ ನಡೆದ ಈ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ   ಐದು ರಾಜ್ಯಗಳ ಅರಣ್ಯ ಇಲಾಖೆಗಳು ಪ್ರಮುಖ ಪಾತ್ರ ವಹಿಸಿದ್ದು, ವಿಭಾಗೀಯ ಅರಣ್ಯ ಅಧಿಕಾರಿಗಳು ಗಳನ್ನು ಜಿಲ್ಲಾ ಮಟ್ಟದ ನೋಡಾಲ್ ಅಧಿಕಾರಿ ಮತ್ತು ಮುಖ್ಯ ಅರಣ್ಯ ಅಧಿಕಾರಿಗಳೆಂದು ರಾಜ್ಯಗಳ ಮಟ್ಟದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಇವುಗಳನ್ನು ಹೊರತುಪಡಿಸಿದಂತೆ ನೆಹರೂ ಯುವ ಕೇಂದ್ರ ಸಂಘಟನೆ, ಗಂಗಾ ವಿಚಾರ್ ಮಂಚ್, ಮತಿತ್ತರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ  ವಿದ್ಯಾಕೇಂದ್ರಗಳು ಈ  ಅಭಿಯಾನದಲ್ಲಿ ಪಾಲ್ಗೊಂಡಿದ್ದವು.

ನವಾಮಿ ಗಂಗೆ ಕಾರ್ಯಕ್ರಮದ ಭಾಗವಾಗಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು, ಗಂಗಾ ಜಲ ಶುದ್ಧೀಕರಣ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯಿಂದ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

SCROLL FOR NEXT