ಉದ್ದವ್ ಠಾಕ್ರೆ 
ದೇಶ

ದೇಶದ ಆಡಳಿತಗಾರರು ಹತ್ಯೆಗಾರರು, ಅವರು ಮನುಷ್ಯರನ್ನು ಕೊಂದು ಪ್ರಾಣಿಗಳನ್ನು ಉಳಿಸುತ್ತಾರೆ : ಶಿವಸೇನಾ

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷ ಶಿವಸೇನಾ ವಾಗ್ದಾಳಿ ನಡೆಸಿದ್ದು,ದೇಶದ ಆಡಳಿತಗಾರರ ಹತ್ಯೆಗಾರರು, ಅವರು ಪ್ರಾಣಿಗಳನ್ನು ಉಳಿಸುತ್ತಾರೆ, ಮನುಷ್ಯರನ್ನು ಕೊಲ್ಲುತ್ತಾರೆ ಎಂದು ಟೀಕಿಸಿದೆ.

ಮುಂಬೈ: ಲೋಕಸಭೆಯಲ್ಲಿ ಇಂದು ಅವಿಶ್ವಾಸ ನಿರ್ಣಯದ ಅಗ್ನಿಪರೀಕ್ಷೆ ಎದುರಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷ ಶಿವಸೇನಾ ವಾಗ್ದಾಳಿ ನಡೆಸಿದ್ದು,ದೇಶದ ಆಡಳಿತಗಾರರ ಹತ್ಯೆಗಾರರು, ಅವರು ಪ್ರಾಣಿಗಳನ್ನು ಉಳಿಸುತ್ತಾರೆ, ಮನುಷ್ಯರನ್ನು ಕೊಲ್ಲುತ್ತಾರೆ ಎಂದು ಟೀಕಿಸಿದೆ.

ಹಣ, ಅಧಿಕಾರ ದುರುಪಯೋಗ ಹಾಗೂ ಇವಿಎಂ ಮೂಲಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು  ಶಿವಸೇನಾ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಶಿವಸೇನಾ ಅನುಮಾನ ವ್ಯಕ್ತಪಡಿಸಿದೆ.

ದೇಶದ ಆಡಳಿತಗಾರರು ಹತ್ಯೆಗಾರರಾಗಿದ್ದು, ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ ಮನುಷ್ಯರನ್ನು ಕೊಲ್ಲುತ್ತಾರೆ. ಆಡಳಿತಗಾರರಲ್ಲಿ ಸಹಾನೂಭೂತಿ ಎಂಬುದು ಇಲ್ಲ.  ಹಣದ ಮೂಲಕ ಚುನಾವಣೆಯಲ್ಲಿ ಗೆದ್ದು , ಅಧಿಕಾರ ಉಳಿಸಿಕೊಳ್ಳುವುದು  ಪ್ರಜಾಪ್ರಭುತ್ವ ಇಲ್ಲ. ಬಹುಮತ ಶಾಶ್ವತವಾದದ್ದಲ್ಲ. ದೇಶದ ಜನರೇ  ಸುಪ್ರೀಂ ಎಂದು ಸಂಪಾದಕೀಯದಲ್ಲಿ  ಉಲ್ಲೇಖಿಸಲಾಗಿದೆ.

ಅವಿಶ್ವಾಸ ನಿರ್ಣಯದಿಂದ ಮೋದಿ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಆದರೂ. ಬೆದರಿಕೆ ನೀಡಲಾಗುತ್ತಿದೆ.  ಬಹುಮತ ಎಂಬುದು  ಶಾಶ್ವತವಾಗಿ ಉಳಿಯಲ್ಲ  ಅಂದರೆ ಅದು ಜನರ ಹಕ್ಕು, ಸರ್ವಾಧಿಕಾರವನ್ನು ಜನರು ಕಿತ್ತೊಗೆಯುವ ಅಧಿಕಾರ ಹೊಂದಿದ್ದಾರೆ.  ರಾಜಕೀಯ ಉದ್ದೇಶ ಕಾರಣದಿಂದ ಅವರು ಜನರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ. ಆದರೆ. ಚುನಾವಣೆಯ ಗಿಮ್ಮಿಕ್ ವಾಸ್ತವ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಅನುಮಾನವಾಗಿದೆ. ಪ್ರತಿಷ್ಠೆಯ ಕಾರಣದಿಂದಾಗಿ  25 ವರ್ಷಗಳ ಮೈತ್ರಿ ಪಕ್ಷವಾಗಿರುವ ನಮ್ಮಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಉಂಟಾಗಿದೆ . ಈ ಪ್ರತಿಷ್ಠೆಯೇ  ಇತ್ತೀಚಿನ ಉಪಚುನಾವಣೆಗಳಲ್ಲಿ  ಬಿಜೆಪಿ ಸೋಲಲು ಪ್ರಮುಖ ಕಾರಣವಾಗಿದೆ ಎಂದು   ಉದ್ದವ್ ಠಾಕ್ರೆ ನಾಯಕತ್ವದ ಶಿವಸೇನಾ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ